ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟ ದರ್ಶನ್ ಇಂದು ಬಳ್ಳಾರಿ ಜೈಲಿಗೆ ಸ್ಥಳಾಂತರಾ ಆಗ್ತಾರಾ? ಎನ್ನುವ ವಿಚಾರದ ಕುರಿತು ನಿರ್ಧಾರವಾಗುವ ಸಾದ್ಯತೆಯಿದೆ .

ನಟ ದರ್ಶನ್,ಲಕ್ಷ್ಮಣ್, ಜಗದೀಶ್ ಮತ್ತು ಪ್ರದೂಷ್‌ರ ಜೈಲು ಶಿಫ್ಟ್ ಆಗುವ ಸಾಧ್ಯತೆ ಇರಬಹುದು. ಜೈಲಾಧಿಕಾರಿಗಳು ನೀಡಿರುವ ಅರ್ಜಿಯನ್ನು ಪರಿಶೀಲಿಸಿದ ಕೋರ್ಟ್ ಈ ಆರೋಪಿಗಳ ಜೈಲು ಸ್ಥಳಾಂತರ ಕುರಿತು ಆದೇಶವನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಹಿಂದೆ ನಟ ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸುಪ್ರೀಂ ಕೋರ್ಟ್ ವಾರ್ನಿಂಗ್ ನೀಡಿತ್ತು, ಮತ್ತೆ ಅದೇ ತಪ್ಪು ಮರುಕಳಿಸಬಾರದೆಂದು ಜೈಲಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.ಆದ್ದರಿಂದ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆಯಾ? ಎಂಬುದನ್ನು ಕಾದುನೋಡಬೇಕಿದೆ.
