ಬಹುಬೇಡಿಕೆಯ ಸ್ಟಾರ್‌ ನಿರೂಪಕಿ ಅನುಶ್ರೀಯವರು ತಮ್ಮ ಗೆಳೆಯನೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ, ನಿರೂಪಕಿಯಾಗಿರುವ ಅನುಶ್ರೀಯವರ ಮದುವೆಯ ಪೋಟೋಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್‌ ಆಗಿವೆ.ಅದರಲ್ಲೂ ಪರಮಾತ್ಮ ಅಪ್ಪು ಇರುವ ಪೋಟೋ ನೋಡುತ್ತಿದ್ದಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೆನಪಲ್ಲಿ ಭಾವುಕರಾಗಿದ್ದಾರೆ.

ಅನುಶ್ರೀ ರಿಸೆಪ್ಷನ್‌ಲ್ಲಿ ಅವರ ಫ್ರೇಂಡ್‌ ನೀಡಿರುವ ಪೋಟೊ ಫ್ರೇಮ್‌ನಲ್ಲಿ ಅಪ್ಪು ಜೊತೆ ದಂಪತಿಗಳು ಪೋಟೋಗೆ ಪೋಸ್‌ ನೀಡುತ್ತಿರುವ ಪೋಟೋವೊಂದನ್ನು ಗಿಫ್ಟ್‌ ಮಾಡಿದ್ದಾರೆ.ಇದನ್ನು ನೋಡಿದ ಅನುಶ್ರೀ ಕಣ್ತುಂಬಿಕೊಂಡಿದ್ದಾರೆ.

ಈ ಸುಂದರ ಕ್ಷಣವನ್ನು ಕ್ರಿಯೆಟ್‌ ಮಾಡಿದ ತನ್ನ ಸ್ನೇಹಿತರಿಗೆ ಅನುಶ್ರೀ ಧನ್ಯವಾದ ತಿಳಿಸಿದ್ದಾರೆ.ಅಲ್ಲದೇ ಈ ಪೋಟೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅಪ್ಪು ಅಭಿಮಾನಿಗಳು ನಗುಮುಖದ ಒಡೆಯ, ಅಪ್ಪು ಅಜರಾಮರ, ಜೊತೆಗಿರದ ಜೀವ ಜೀವಂತ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *