ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್, ಜಗಳ, ಫ್ಯಾಮಿಲಿ ವೀಕ್ ಹೀಗೆ ಸಂಭ್ರಮ ಖುಷಿಯಲ್ಲಿದ್ದ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಮತ್ತೆ ಕಿಚ್ಚು ಹೆಚ್ಚಾಗಿದೆ.ಕ್ಯಾಪ್ಟನ್ ಗಿಲ್ಲಿ ಮತ್ತು ಅಶ್ವಿನಿಗೌಡ ನಡುವೆ ಮತ್ತೆ ಜಗಳ ಶುರುವಾಗಿದ್ದು, ಅಶ್ವಿನಿಯವರ ಕೈಯಲ್ಲಿ ಕೆಲಸ ಮಾಡ್ಸಿಯೇ ತೀರುತ್ತೇನೆ ಎಂದು ಗಿಲ್ಲಿ ನಟ ಶಪಥ ಮಾಡಿರುವ ರೋತಿ ಭಾಸವಾಗುತ್ತಿದೆ.

ಗಿಲ್ಲಿ ಮತ್ತು ಅಶ್ವಿನಿಗೌಡ ಯಾವಾಗಲೂ ಯಾವುದೋ ಒಂದು ವಿಷಯಕ್ಕೆ ಜಗಳವಾಡ್ತಾನೆ ಇರ್ತಾರೆ. ಮೊದಲಿನಿಂದಲೂ ಅಶ್ವಿನಿ ಗೌಡರನ್ನು ಅತ್ತೆ ಮಗಳು ಎಂದು ರೇಗಿಸುತ್ತಿದ್ದರು, ಫ್ಯಾಮಿಲಿ ವೀಕ್ ಆಗಿದ್ದಾಗಿನಿಂದಲೂ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು.ಮತ್ತೆ ಅಶಿವಿನಿಗೌಡ ಮತ್ತು ಗಿಲ್ಲಿ ನಡುವೆ ಮತ್ತೆ ಕಿಚ್ಚು ಹೊತ್ತಿಕೊಂಡಿದ್ದು, ಕೋಲ್ಡ್ ವಾರ್ ನಡೆಯುತ್ತಲೇಯಿದೆ.
ಅಶ್ವಿನಿಗೌಡಗೆ ಕಿಚನ್ ಕೆಲಸ ಮುಗಿಸಿ ಎಂದು ಗಿಲ್ಲಿ ಹೇಳಿದ ಮಾತಿಗೆ ನಾನು ಅಮೇಲೆ ಮಾಡುತ್ತೇನೆ ನನಗೀಗ ಸುಸ್ತು ಆಗುತ್ತಿದೆ ಎಂದು ಅಶಿವಿನಿಗೌಡ ಹೇಳಿದಾಗ ಹಾರೆ ತೊಗೊಂಡು ಭೂಮಿ ಅಗೆಯುವುದಕ್ಕೆ ಹೋಗಿದ್ರಾ ಅದೆಲ್ಲಗೊತ್ತಿಲ್ಲ ಈಗ ಕೆಲಸ ಮುಗಿಸಲೇಬೇಕು, ಇದು ನನ್ನ ಆಜ್ಞೆ ಎಂದು ಗಿಲ್ಲಿ ಹೇಳ್ದಾಗ ಅವರ ಮಾತಿಗೆ ಸಿಟ್ಟಾದ ಅಶ್ವಿನಿ ನಿಧಾನಕ್ಕೆ ಮಾತಾಡು ಕ್ಯಾಪ್ಟನ್ ಆದ್ಮೇಲೆ ನಿನಗೇನು ದೊಡ್ಡ ಕೊಂಬು ಬಂದಿದೆಯಾ ಎಂದು ಕೇಳ್ತಾರೆ.ಅದಕ್ಕೆ ಉತ್ತರಿಸಿದ ಗಿಲ್ಲಿ ನೀನು ಕ್ಯಾಪ್ಟನ್ ಆಗಿ ತೋರಿಸು ಎಂದು ಏಕವಚನದಲ್ಲೇ ತಿರುಗೇಟನ್ನು ನೀಡಿದ್ದಾರೆ.

ನೀನು ನಾನು ಎಂದು ಏಕವಚನದಲ್ಲಿ ಮಾತನಾಡಿದ್ರೆ ಸರಿಯಿರಲ್ಲೆಂದು ಅಶ್ವಿನಿಗೌಡ ಸಿಟ್ಟಿನಿಂದ ಎಗರಾಡ್ತಾರೆ. ನೀನು ಕೆಲ್ಸ ಮಾಡಲಿಲ್ಲವೆಂದರೆ ನಾಣು ಹೀಗೆ ಮಾತನಾಡುವುದು ಎಂದು ಗಿಲ್ಲಿ ಪ್ರತ್ಯುತ್ತರ ನೀಡಿದ್ದು, ಇವರಿಬ್ಬರ ವಾಕ್ಸಮರ ನಡೆಯುತ್ತಲೇಯಿದೆ.
