ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಎಲ್ಲಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಆ ಸೀರಿಯಲ್‌ನಲ್ಲಿ ಪುಟ್ಟಕ್ಕನ ಮಗಳಾಗಿ ನಟಿಸಿರುವ ಸ್ನೇಹಾ ಸಹಜ ಸುಂದರಿಯಾಗಿ ಎಲ್ಲರ ಮನಸ್ಸಲ್ಲಿ ಅಚ್ಚಾಗಿದ್ದಾರೆ.

ಸ್ನೇಹಾ ಪಾತ್ರದಾರಿಯಾಗಿರುವ ನಟಿ ವಿದ್ಯಾ ರಾಜ್‌ , ಹಿಂದೆ ರಾಮಾಚಾರಿ ಸೀರಿಯಲ್‌ನಲ್ಲಿ ರುಕ್ಕು ಪಾತ್ರವನ್ನು ನಿಭಾಯಿಸುತ್ತಿದ್ದರು. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿಯ ಹೆಂಡತಿಯಾಗಿ ನಟಿಸುತ್ತಿರುವ ಇವರು ಅಭಿನಯ ಮನೆಮಾತಾಗಿದೆ.

ಈ ನಟಿಯು ಸರಳವಾಗಿ ಸುಂದರವಾಗಿ ಕಾಣಿಸಿಕೊಂಡಿರುವ ಇವರು ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.

ನಟಿ ವಿದ್ಯಾರಾಜ್‌ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದು, ಹೊಸ ಹೊಸ ಪೋಟೋಸ್‌, ವಿಡಿಯೋಸ್‌ ಹಂಚಿಕೊಳ್ಳುತ್ತಿದ್ದಾರೆ.

ಸೀರಿಯಲ್‌ಗಳಲ್ಲಿ ಸದಾ ಸರಳ ಸುಂದರಿಯಂತೆ ಕಂಗೊಳಿಸುವ ವಿದ್ಯಾರಾಜ್‌ ಇದೀಗ ರೌಡಿ ಬೇಬಿಯ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದು, ಆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿದ್ಯಾರಾಜ್‌ ಸದ್ಯ ತೆಲುಗು ಮತ್ತು ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆಯೂ ಕನ್ಯಾದಾನ ಸೀರಿಯಲ್‌ನಲ್ಲಿ ನಟಿಸಿದ್ದರು. ಬಹದ್ದೂರ್‌ಗಂಡು, ಇನ್ನೂ ಮುಂತಾದ ಚಿತ್ರಗಳಲ್ಲಿ ಮಿಂಚಿದ್ದಾರೆ.

Leave a Reply

Your email address will not be published. Required fields are marked *