ಇಂದೋರ್‌ನ ಕೆಲವು ಭಾಗಗಳಲ್ಲಿ ಪೂರೈಕೆಯಾದ ಕಲುಷಿತ ನೀರಿನ ಸೇವನೆಯಿಂದಾಗಿ ಹಲವಾರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಮತ್ತು ದುರದೃಷ್ಟವಶಾತ್ ಸಾವುಗಳು ಸಂಭವಿಸಿವೆ. ಇದು ನಗರದ ಮೂಲಸೌಕರ್ಯ ಮತ್ತು ಸಾರ್ವಜನಿಕ ಆರೋಗ್ಯ ನಿರ್ವಹಣೆಯ ಮೇಲೆ ದೊಡ್ಡ ಪರಿಣಾಮವನ್ನು ಬೀರಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿಯವರು ಸಂತ್ರಸ್ತರನ್ನು ಭೇಟಿ ಮಾಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವುದು ಇವರ ಕರ್ತವ್ಯವಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ರಾಜಕೀಯ ತಂತ್ರ ಕೂಡ ಹೌದು.
ಇಂದೋರ್ ನಗರವು ‘ಸ್ವಚ್ಛ ಭಾರತ್’ ಅಭಿಯಾನದಲ್ಲಿ ಸತತವಾಗಿ ಅಗ್ರಸ್ಥಾನ ಪಡೆಯುತ್ತಿರುವ ನಗರವಾಗಿದೆ. ಅಂತಹ ನಗರದಲ್ಲೇ ಕಲುಷಿತ ನೀರಿನಿಂದ ಸಾವುಗಳು ಸಂಭವಿಸಿರುವುದು ಆಡಳಿತ ಮಂಡಳಿಯ ಮತ್ತು ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.
ಬಡ ಮತ್ತು ಮಧ್ಯಮ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ಇಂತಹ ಘಟನೆಗಳು ಸಂಭವಿಸುವುದು ವ್ಯವಸ್ಥೆಯು ಕೇವಲ ಮೇಲ್ನೋಟದ ಪ್ರಾಮುಖ್ಯತೆ ನೀಡಿ, ತಳಮಟ್ಟದ ಮೂಲಸೌಕರ್ಯವಾದ ಕುಡಿಯುವ ಶುದ್ದ ನೀರನ್ನು ಪೂರೈಸಲು ವಿಫಲವಾಗಿದೆ.
ಸಂತ್ರಸ್ಥರನ್ನು ರಾಹುಲ್ ಗಾಂಧಿಯವರು ಭೇಟಿ ಮಾಡಿದ ನಂತರ ಈ ಮೂರು ಪರಿಹಾರವನ್ನು ಕಂಡುಕೊಳ್ಳುವುದರ ಕುರಿತು ಚಿಂತನೆ ನಡೆಸಿದ್ದಾರೆ.
1. ನಗರದ ಕುಡಿಯುವ ನೀರಿನ ಪೈಪ್‌ಲೈನ್‌ಗಳ ಸಂಪೂರ್ಣ ತಪಾಸಣೆಯಾಗಬೇಕು.
2.ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಆರ್ಥಿಕ ನೆರವು ಮತ್ತು ಉಚಿತ ಚಿಕಿತ್ಸೆ ಸಿಗಬೇಕು.
3.ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
