ಪಾಕಿಸ್ತಾನ ಆಫ್ಘಾನಿಸ್ತಾನದ ಮೇಲೆ ವಾಯು ದಾಳಿಯನ್ನು ನಡೆಸಿರುವ ವಿಡಿಯೋ ಇದೀಗ ಲಭ್ಯವಾಗಿದೆ.
ಆಫ್ಘಾನ್ ಮತ್ತು ತಾಲಿಬಾನ್ ಪೋಸ್ಟ್‌ಗಳ ಮೇಲೆ ದಾಳಿಯನ್ನು ನಡೆಸಲಾಗಿದೆ ಎಂದು ಸ್ಥಳೀಯ ಮೂಲಗಳಿಂದ ಮಾಹಿತಿ ದೊರೆತಿದೆ.
ವಾಯುದಾಳಿಯಲ್ಲಿ 4ಮಂದಿ ಪಾಕಿಸ್ತಾನಿ ಭದ್ರತಾ ಸಿಬ್ಬಂಧಿಗಳು ಮೃತಪಟ್ಟಿದ್ದು,ನಾಲ್ವರು ಗಾಯಗೊಂಡಿದ್ದಾರೆ. ಇಟ್ಟು 10 ಮಂದಿಯನ್ನು ಚಮನ್ ಆಸ್ಪತ್ರೆಗೆ ರವಾನಿಸಲಾಗಿದೆಂದು ವರದಿಯಾಗಿದೆ.
ಎರಡು ದೇಶಗಳಿಂದ ನಡೆದ ವಾಯುದಾಳಿಯಿಂದಾಗಿ ಕಪ್ಪು ಹೊಗೆ ಏರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.ಆಫ್ಘಾನ್ ಪಡೆಗಳು ಪಾಕಿಸ್ತಾನದ ಮಿಲಿಟರಿ ಪೋಸ್ಟ್‌ಗಳನ್ನು ಹೊಡೆದಾಕಿರುವ ಪರಿಣಾಮ ಹೋರಾಟ ಪ್ರಾರಂಭವಾಗಿದೆ ಎನ್ನಲಾಗಿದೆ.
