ಬೀದರ್: ನವೆಂಬರ್ ತಿಂಗಳಿನಲ್ಲಿ ನಿತಿನ್ ಗಡ್ಕರಿಯವರು ಪ್ರಧಾನಿಗಳಾಗ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಸಂತೋಷ್ ಲಾಡ್ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ʼನವೆಂಬರ್ ಕ್ರಾಂತಿಯʼ ಬಗ್ಗೆ ನಮಗೆ ಕುತೂಹಲವಿದೆ. ನಿತಿನ್ ಗಡ್ಕರಿಯವರು ಪ್ರಧಾನಿಯಾಗ್ತಾರೆ ಎಂಬ ಮಾಹಿತಿ ನಮಗಿದೆ ಎಂದು ಹೇಳಿದ್ದಾರೆ.
ಎಲ್ಲಾ ಭಾರತೀಯರು ದೇಶ ಪ್ರೇಮಿಗಳೇ. ಆರ್‌ಎಸ್‌ಎಸ್‌ಗೆ ಸಪರೆಟ್ಟಾಗಿ, ವಿಷೇಶವಾಗಿ ದೇಶ ಪ್ರೇಮವಿಲ್ಲ. ಈ ಹಿಂದೆಯೇ 3 ಸಾವಿರ ಕೋಟಿ ಖರ್ಚುಮಾಡಿ ಸರ್ದಾರ್ ವಲ್ಲಬಾಯಿ ಪಟೇಲ್ ಪ್ರತಿಮೆ ನಿರ್ಮಾಣ ಮಾಡುವ ಸಮಯದಲ್ಲಿ ಬಿಜೆಪಿಗರು ವಿರೋಧವನ್ನು ವ್ಯಕ್ತಪಡಿಸಿದ್ದರು ರಂದು ಅಸಮಾಧಾನವನ್ನು ಹೊರಹಾಕಿದ್ದಾರೆ.
