2025 ಮುಗಿದು 2026 ನೇ ವರ್ಷ ಎಂಟ್ರಿಯಾಗುವಾಗ ಹೊಸ ವರ್ಷಾಚರಣೆಯನ್ನು ಆಚರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೊಸ ವರ್ಷದ ಆಚರಣೆಗೆ ಇನ್ನು 2 ದಿನವಿದ್ದು, ಬೆಂಗಳೂರು ನಗರದಲ್ಲಿ ಸಾರ್ವಜನಿಕರ ಸೆಪ್ಟಿಗಾಗಿ 20 ಸಾವಿರ ಪೊಲೀಸರನ್ನು ನೇಮಕ ಮಾಡಲಾಗಿದೆ.

ಈ ವಿಚಾರದ ಕುರಿತು ಮಾಹಿತಿ ಹಂಚಿಕೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ನ್ಯೂ ಇಯರ್‌ ಸೆಲೆಬ್ರೆಷನ್‌ ವೇಳೆ  ನಗರದಲ್ಲಿ ಭದ್ರತೆಗಾಗಿ 20 ಸಾವಿರ ಪೊಲೀಸರನ್ನು ನೇಮಕ ಮಾಡಲಾಗಿದೆ.  4  ಪೊಲೀಸ್ ಕಂಟ್ರೋಲ್ ರೂಮ್ಗಳು,   46 ಆ್ಯಂಬುಲೆನ್ಸ್ಸೇವೆ, 55 ಅಗ್ನಿಶಾಮಕ ದಳದ ವಾಹನಗಳು, 164 ಮಹಿಳಾ ಸಹಾಯ ಕೇಂದ್ರಗಳು,   400 ಟ್ರಾಫಿಕ್  ವಾರ್ಡನ್ಗಳು,  3 ಕಮಾಂಡೋ ಟೀಂಗಳು, 3341 ಹೋಮ್ ಗಾರ್ಡ್ ಪೊಲೀಸರು,2436 ಟ್ರಾಫಿಕ್‌ ಪೊಲೀಸರು,   78 ವಾಚ್ ಟವರ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರ ಶಾಂತಿಗೆ ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಡಿಸೆಂಬರ್ 31ರ ರಾತ್ರಿಯ 10 ಗಂಟೆಯ ನಂತರ  50 ಫ್ಲೈಓವರ್ಗಳನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನ 166 ಕಡೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ಗಳನ್ನು ನಡೆಸಲಾಗುತ್ತದೆ.  ಬೈಕ್‌ ವೀಲ್ಹಿಂಗ್ ಎತ್ತುವವರ ಮೇಲೆ  ಹದ್ದಿನ ಕಣ್ಣಿಡಲಾಗಿದೆ. ವೀಲ್ಹಿಂಗ್ ಮಾಡುವ ಸ್ಥಳಗಳನ್ನು ಗುರುತಿಸಿ ಆ ಸ್ಥಳಗಳಲ್ಲಿ ಪೊಲೀಸರನ್ನ ನೇಮಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

Leave a Reply

Your email address will not be published. Required fields are marked *