ದೊಡ್ಮನೆಯಲ್ಲಿ ಕ್ಯಾಪ್ಟನ್‌ ಆಗಿರುವಂತಹ ಮಾಳು ತಮಗೆ ಸಿಕ್ಕ ವಿಷೇಶವಾದ ಅಧಿಕಾರದಲ್ಲಿ 6 ಜನರನ್ನು ನಾಮಿನೇಟ್‌ ಮಾಡಿದ್ದರು.

ಕಾಕ್ರೋಚ್‌ ಸುಧಿ, ಅಶ್ವಿನಿಗೌಡ, ಧ್ರುವಂತ್‌, ರಕ್ಷಿತಾ, ಜಾಹ್ನವಿ ಮತ್ತು ರಾಶಿಕಾ ಶೆಟ್ಟಿ ನಾಮಿನೇಟ್‌ ಆಗಿರುವ ಸ್ಪರ್ಧಿಗಳು. ನಾಮಿನೇಟ್‌ ಪ್ರಕ್ರಿಯೆ ನಡೆದ ನಂತರ ಸ್ಪರ್ಧಿಗಳ ಗುಂಪನ್ನು 2 ಗುಂಪುಗಳಾಗಿ ಮಾಡಲಾಯಿತು. ನಾಮಿನೇಟ್‌ ಆಗಿರುವ ತಂಡ ಮತ್ತು ಸೇವ್‌ ಆಗಿರುವ ತಂಡಗಳೆಂದು ಪರಿಗಣಿಸಲಾಗಿತ್ತು.

ನಂತರ ಬಿಗ್‌ಬಾಸ್‌ ಮತ್ತೊಂದು ಹೊಸ ಟಾಸ್ಕ್‌ವೊಂದನ್ನು ನೀಡಿತ್ತು. ಆ ಟಾಸ್ಕನ್ನು ನಾಮಿನೇಟ್‌ ಆಗಿರುವ ತಂಡ ವಿಜೇತವಾಗಿತ್ತು.ಗೆದ್ದ ತಂಡಕ್ಕೆ ಒಂದು ರಿವಾರ್ಡ್‌ನೀಡಲಾಗಿತ್ತು ಅದೆನೆಂದರೆ ನಾಮಿನೇಟ್‌ ಆಗಿರುವ ಒಬ್ಬ ಸ್ಪರ್ಧಿಯನ್ನು ಸೇವ್‌ ಮಾಡುವ ಅವಕಾಶವನ್ನು ನೀಡಿತ್ತು.ಅದರೊಟ್ಟಿಗೆ ಸೇವ್‌ ಆಗಿರುವ ತಂಡದಿಂದ ಒಬ್ಬ ಸದಸ್ಯನನ್ನು ನಾಮಿನೇಟ್‌ ಮಾಡಬೇಕೆನ್ನುವ ಟ್ವೀಸ್ಟ್‌ ಇತ್ತು.ಇದೇ ವಿಚಾರಕ್ಕೆ ದೊಡ್ಮನೆ ರಣರಂಗವೇ ಆಗಿಬಿಟ್ಟಿದೆ. ನಾಮಿನೇಟ್‌ ಆಗಿರುವ ವ್ಯಕ್ತಿಗಳಲ್ಲಿ ರಕ್ಷಿತಾ ಸುಧಿಯವರನ್ನು ಸೇವ್‌ ಮಾಡಲು ಹೊರಟಿದ್ದರೆ ಇಡೀ ತಂಡ ರಾಶಿಕಾರವರನ್ನು ಸೇವ್‌ ಮಾಡಲು ಹಗ್ಗಜಗ್ಗಾಟ ನಡೆಯುತ್ತಿತ್ತು.

ರಕ್ಷಿತಾ ನಡೆಯಿಂದ ಕೋಪಗೊಂಡ ರಾಶಿಕಾ ನಾನು 4 ವಾರಗಳಿಂದ ನಾಮಿನೇಟ್‌ ಆಗುತ್ತಾ ಬಂದಿದ್ದೇನೆ.ನನಗೆ ಈ ಸಲವಾದರೂ ಅವಕಾಸ ನೀಡಿ ಎಂದು ಕಿರುಚಿದ್ದಾರೆ.ಆದರೆ ಆ ಮಾತಿಗೆ ರಕ್ಷಿತಾ ಬಿಲ್‌ಕುಲ್‌ ಒಪ್ಪದೇ ತಮ್ಮ ನಿಲುವನ್ನು ಬದಲಿಸದೆ ವಾದ ಮಾಡುತ್ತಿದ್ದಾರೆ.

ರಕ್ಷಿತಾ ಬಂಡದೈರ್ಯವನ್ನು ಸಹಿಸದ ರಾಶಿಕಾ ಇಂತ ವಿಷಕಾರಿ ಮನೆಯಲ್ಲಿದ್ದರೆ ಅಷ್ಟೇ ಎಂದು ಕೆಂಡಕಾರಿದ್ದಾರೆ. ರಕ್ಷಿತಾ ಒಬ್ಬಳ ನಿರ್ಧಾರವನ್ನು ನಾನು ಒಪ್ಪಲ್ಲ. ಕಡೆ ರಾಶಿಕಾ ಮಾತನಾಡುವ ರೀತಿಯನ್ನು ರಕ್ಷಿತಾ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ರಾಶಿಕಾ ನೀನು ಮಾತನಾಡುವ ರೀತಿ ಹೇಗಿದೆ ಎಂದು ಅಭಿನಯ ಮಾಡಿ ತೋರಿಸಿದ್ದಾರೆ .ಸೇವ್‌ ಆಗಿರುವ ಸದಸ್ಯ ಸೇಫ್‌ ತಂಡವನ್ನು ಸೇರಿದರೆ, ನಾಮಿನೇಟ್‌ ಆಗಿರುವ ಸದಸ್ಯ ಮನೆಯಿಂದ ಹೋರಹೋಗುವ ತಂಡವನ್ನು ಸೇರಲಿದ್ದಾರೆ.

ಇಂದಿನ ಸಂಚಿಕೆಯಲ್ಲಿ ಏನಾಗಬಹುದು ಎಂಬುದನ್ನು ಕಾದುನೋಡೋಣ

Leave a Reply

Your email address will not be published. Required fields are marked *