ಬೆಂಗಳೂರು: ದಿಂಬು ಹಾಸಿಗೆಗಾಗಿ ದರ್ಶನ್ ಪರ ವಕೀಲರು ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.ತಿಂಗಳಿಗೆ 1 ಸಾರಿ ಮಾತ್ರ ಬಟ್ಟೆ ಮತ್ತು ಹೊದಿಕೆಗಳನ್ನು ಒದಗಿಸಲು 57ನೇ ಸಿಸಿಎಚ್ ನ್ಯಾಯಾಲಯ ಆದೇಶವನ್ನು ನೀಡುವುದರ ಮೂಲಕ ನಟ ದರ್ಶನ್‌ಗೆ ಸಾಕ್ ನೀಡಿದೆ.
ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಕ್ವಾರಂಟೈನ್ ಸೆಲ್ಲಿನಿಂದ ಮೆನ್ ಸೆಲ್‌ಗೆ ಸ್ಥಳಾಂತರ ಮಾಡಲು ಕೋರಿ ನೀಡಿದ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಧಿಕಾರಿಗಳಿಗೆ ನ್ಯಾಯಾಲಯ ಅವಕಾಶವನ್ನು ನೀಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣೆ ಕೋರಿ ನೀಡಿದ ಎಸ್‌ಪಿಪಿ ಅರ್ಜಿಯನ್ನು ನ್ಯಾಯಾಯಲ ಮಾನ್ಯ ಮಾಡಿದೆ ಎಂದು ತಿಳಿದುಬಂದಿದೆ. ಅಕ್ಟೋಬರ್ 21ರಂದು ದೋಷಾರೋಪ ನಿಗದಿಗೆ ನ್ಯಾಯಾಲಯ ಸೂಚನೆಯನ್ನು ನೀಡುವ ಮೂಲಕ ದರ್ಶನ್‌ಗೆ ಸಂಕಷ್ಟ ಎದುರಾಗಿದೆ.
A1 ಆರೋಪಿಯಾಗಿರುವ ಪವಿತ್ರಾಗೌಡ ಮತ್ತು A2 ಆರೋಪಿಯಾಗಿರುವ ದರ್ಶನ್ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಹಾಜರಾಗಿದ್ದರೇ, ಇನ್ನುಳಿದ ಆರೋಪಿಗಳು ಕೋರ್ಟಿನಲ್ಲಿದ್ದರು ಎನ್ನಲಾಗಿದೆ.
