ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ವಸತಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಮನೆಗಳನ್ನು ಜೆಸಿಬಿ ನೆಲಸಮ ಮಾಡಿತ್ತು. ವಸತಿ ತೆರವುಗೊಂಡ ಸ್ಥಳಕ್ಕೆ ರಾಜೀವ್‌ಗಾಂಧಿ ವಸತಿ ಯೋಜನೆಯ 20 ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮನೆಗಳು ತೆರವುಗೊಂಡ ಸ್ಥಳದಲ್ಲಿ 180 ಮಂದಿ ವಾಸವಿದ್ದಾರೋ ಎಂದು ಪರಿಶೀಲನೆ ನಡೆಸಿದ ಅಧಿಕಾರಿಗಳು ಅಲ್ಲಿ ವಾಸಿಸುವ ವ್ಯಕ್ತಿಗಳ ಆಧಾರ್‌ಕಾರ್ಡ್, ವೋಟರ್ ಐಡಿ, ಜಿಪಿಎಸ್‌ಪೋಟೋದೊಂದಿಗೆ ವಸತಿಯನ್ನು ಕಳೆದುಕೊಂಡವರ ಫುಲ್ ಡಿಟೇಲ್ಸ್ ಪಡೆದುಕೊಂಡು ಅದಕ್ಕೆ ಪರ್ಯಾಯವಾಗಿ ಮನೆಗಳನ್ನು ನೀಡಲು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಮಾನವ ಹಕ್ಕುಗಳ ಆಯೋಗದಿಂದ ಯಲಹಂಕ ತಹಶೀಲ್ದಾರ್‌ರವರಿಗೆ ನೋಟಿಸ್ ನೀಡಲು ನಿರ್ಧರಿಸಿ ಕೋಗಿಲು ಲೇಔಟ್ ಮಾಡಿರುವ ಸ್ಥಳೀಯ ನಾಯಕರಿಗೂ ನೋಟಿಸ್ ನೀಡಲಾಗುವುದು ಎಂದು ತಿಳಿದುಬಂದಿದೆ.
