ನವದೆಹಲಿ: ಭಾರತದ ಕ್ರಿಕೆಟ್ ಆಟಗಾರ್ತಿ ಗೌಹರ್ ಸುಲ್ತಾನ್ ಎಲ್ಲಾ ರೀತಿಯ ಕ್ರಿಕೆಟ್ ಆಟಕ್ಕೆ ನಿವೃತ್ತಿಯನ್ನು ಘೋಷಿಸಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಎಡಗೈ ಸ್ಪಿನ್ನರ್ ಗೌಹರ್ ಸುಲ್ತಾನ 2008ರಲ್ಲಿ ಪಾಕಿಸ್ತಾನ ವಿರುದ್ದ ಏಕದಿನ ಪಂದ್ಯದ ಮೂಲಕ ಇಂಟರ್‌ನ್ಯಾಷನಲ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದು, 50 ಏಕದಿನ ಪಂದ್ಯಗಳು ಮತ್ತು 37 ಟೀ ಟ್ವೆಂಟಿ ಪಂದ್ಯಗಳನ್ನಾಡಿ ದೇಶಕ್ಕೆ ಆಡಿದ್ದಾರೆ. ಸುಲ್ತಾನರವರು ಕೊನೆಯದಾಗಿ 2014ರಲ್ಲಿ ಕಾಣಿಸಿಕೊಂಡಿರುವುದು ಟಿ ಟ್ವೆಂಟಿ ವಿಶ್ವಕಪ್ ಸಮಯದಲ್ಲಿ, ಇತ್ತೀಚೆಗೆ 2024ಮತ್ತು 2025ರ ಮಹಿಳಾ ಪ್ರೀಮಿಯರ್ಲೀಗ್ ಯುಪಿ ವಾರಿಯರ್ಸ್ ಪರ ಆಡುತ್ತಿದ್ದರು.
37 ವರ್ಷದ ಸುಲ್ತಾನ ಅಂತಿಮವಾಗಿ ನಿವೃತ್ತಿಯನ್ನು ಘೋಷಿಸಿ ಆ ಪೋಸ್ಟಿನಲ್ಲಿ ಭಾರತಕ್ಕಾಗಿ ಆಟ ಆಡುವುದು ತಮ್ಮ ಜೀವನದ ಅತ್ಯಂತ ದೊಡ್ಡ ಗೌರವ ಎಂದು ಬರೆದುಕೊಂಡಿದ್ದಾರೆ.
