BCCI ಹಂಗಾಮಿ ಮುಖ್ಯಸ್ಥರಾಗಿ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ರಾಜೀವ್‌ ಶುಕ್ಲಾ ಪ್ರಸ್ತುತ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರವನ್ನು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತದ ಮಾಜಿ ವೇಗಿ ರೋಜರ್‌ ಬಿನ್ನಿ BCCIನ ಅಧ್ಯಕ್ಷರಾಗಿದ್ದರು. ಉಪಾದ್ಯಕ್ಷರಾಗಿ ರಾಜೀವ್‌ ಶುಕ್ಲಾ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅವರೇ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು, ಮುಂದಿನ ಸುತ್ತಿನ ಚುನಾವಣೆ ನಡೆಯುವವರೆಗೂ ಶುಕ್ಲಾರವರು ಹಂಗಾಮಿ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ರೋಜರ್‌ ಬಿನ್ನಿಯವರು 2022 ಅಕ್ಟೋಬರ್‌ನಲ್ಲಿ BCCIನ 36ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಅಲ್ಲಿಯವರೆಗೂ ಸೌರವ್‌ ಗಂಗೂಲಿ ಆ ಸ್ಥಾನ ಅಲಂಕರಿಸಿದ್ದರು.ಬಿನ್ನಿ ಅಧಿಕಾರವಧಿಯಲ್ಲಿ ಭಾರತದ ಪುರುಷರ ತಂಡ 2024ರ T20ವಲ್ಡ್‌ಕಪ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿಯನ್ನು ಗೆದ್ದುಕೊಂಡಿತ್ತು .

Leave a Reply

Your email address will not be published. Required fields are marked *