ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಈ ಮಹತ್ವದ ತೀರ್ಪುಗಳು ಹಿರಿಯ ನಾಗರಿಕರ ರಕ್ಷಣೆಗೆ ಒಂದು ದೊಡ್ಡ ಆಸರೆಯಾಗಿವೆ. “ಹೆತ್ತವರನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕಿಲ್ಲ” ಎಂಬ ಈ ತೀರ್ಪು ನೀಡಿದೆ.

ಯಾವುದೇ ಪೋಷಕರು ಅಥವಾ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಪ್ರೀತಿ ಅಥವಾ ನಂಬಿಕೆಯಿಂದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ವರ್ಗಾವಣೆ ಮಾಡಿದ ನಂತರ, ಆ ಮಕ್ಕಳು ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಆ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸುವಸಂಪೂರ್ಣ ಅಧಿಕಾರ ಪೋಷಕರಿಗಿದೆ.

ಈ ತೀರ್ಪು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007″ ರ ಸೆಕ್ಷನ್ 23 ಅನ್ನು ಆಧರಿಸಿದೆ.

ಒಂದು ವೇಳೆ ಆಸ್ತಿ ವರ್ಗಾವಣೆ ಮಾಡುವಾಗ “ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು” ಎಂಬ ಶರತ್ತು ಇದ್ದರೆ, ಅದನ್ನು ಉಲ್ಲಂಘಿಸಿದಾಗ ಆಸ್ತಿ ವಾಪಸ್ ಪಡೆಯಬಹುದು.ಇತ್ತೀಚಿನ ಕೋರ್ಟ್‌ ತೀರ್ಪುಗಳ ಪ್ರಕಾರ, ವರ್ಗಾವಣೆ ಪತ್ರದಲ್ಲಿ ಅಂತಹ ಶರತ್ತು ಸ್ಪಷ್ಟವಾಗಿ ನಮೂದಿಸದಿದ್ದರೂ ಸಹ, “ಪ್ರೀತಿ ಮತ್ತು ವಿಶ್ವಾಸ”ದಿಂದ ನೀಡಿದ ಆಸ್ತಿಯ ಪ್ರತಿಯಾಗಿ ಮಕ್ಕಳ ಮೇಲೆ ಪೋಷಕರನ್ನು ನೋಡಿಕೊಳ್ಳುವ ನೈತಿಕ ಮತ್ತು ಕಾನೂನಾತ್ಮಕ ಜವಾಬ್ದಾರಿ ಇರುತ್ತದೆ ಎಂದು ಕೋರ್ಟ್ ಹೇಳಿದೆ.

ಮಕ್ಕಳು ಪೋಷಕರಿಗೆ ಮೂಲಭೂತ ಸೌಕರ್ಯ, ವೈದ್ಯಕೀಯ ನೆರವು ಮತ್ತು ಗೌರವಯುತ ಜೀವನವನ್ನು ನೀಡಲು ವಿಫಲರಾದರೆ, ಆಸ್ತಿ ವರ್ಗಾವಣೆಯನ್ನು ಅನೂರ್ಜಿತ ಎಂದು ಘೋಷಿಸಬಹುದು.ಕೇವಲ ಆಸ್ತಿ ವಾಪಸ್ ಪಡೆಯುವುದು ಮಾತ್ರವಲ್ಲದೆ, ಪೋಷಕರು ಪ್ರತಿ ತಿಂಗಳು ನಿರ್ವಹಣಾ ವೆಚ್ಚವನ್ನು ಪಡೆಯುವ ಹಕ್ಕನ್ನೂ ಹೊಂದಿದ್ದಾರೆ.

ಹಿರಿಯ ನಾಗರಿಕರು ಆಸ್ತಿ ವಾಪಸ್ ಪಡೆಯಲು ಸಿವಿಲ್ ಕೋರ್ಟ್‌ಗೆ ಹೋಗಿ ವರ್ಷಗಟ್ಟಲೆ ಕಾಯಬೇಕಿಲ್ಲ. ಸಹಾಯಕ ಕಮಿಷನರ್ ನೇತೃತ್ವದ ಟ್ರಿಬ್ಯೂನಲ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಶೀಘ್ರವಾಗಿ ನ್ಯಾಯ ಪಡೆಯಬಹುದು.

ಪೋಷಕರನ್ನು ನೋಡಿಕೊಳ್ಳುವುದು ಕೇವಲ ಧರ್ಮ ಅಥವಾ ದಾನವಲ್ಲ, ಅದು ಮಕ್ಕಳ ಶಾಸನಬದ್ಧ ಕರ್ತವ್ಯ.ಆಸ್ತಿಯನ್ನು ಪಡೆದುಕೊಂಡು ಪೋಷಕರನ್ನು ಬೀದಿಗೆ ತಳ್ಳುವುದು ಅಥವಾ ಅವರ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ.ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದಂತೆ, ಇಂತಹ ಪ್ರಕರಣಗಳಲ್ಲಿ ಕೇವಲ ಪೋಷಕರಿಗೆ ಮಾತ್ರ ಜಿಲ್ಲಾಧಿಕಾರಿಗಳ ಮುಂದೆ ಮೇಲ್ಮನವಿ ಸಲ್ಲಿಸುವ ವಿಶೇಷ ಹಕ್ಕು ಇರುತ್ತದೆ.

Leave a Reply

Your email address will not be published. Required fields are marked *