ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ಬೇರೆ ಭಾಷೆಯ ಜನರೇ ಹೆಚ್ಚು. ಅದರಲ್ಲಿ ನಮ್ಮ ಕನ್ನಡವನ್ನು ಮಾತನಾಡಿ ಕನ್ನಡವನ್ನು ಉಳಿಸಿ ಎಂದು ಹೇಳುತ್ತಿದ್ದರೂ ಕೆಲವರು ನಾವು ಯಾಕೆ ಕನ್ನಡ ಮಾತನಾಡಬೇಕು ನೀವೆ ನಮ್ಮ ಔಆಷೆಯನ್ನು ಕಲಿತುಕೊಳ್ಳಿ ಎಂದು ವಾದ ಮಾಡುತ್ತಿರುತ್ತಾರೆ. ಆದರೆ ಜಪಾನ್ ಮಹಿಳೆ ಕನ್ನಡವನ್ನು ಇಷ್ಟು ಚೆನ್ನಾಗಿ ಮಾತನಾಡುತ್ತಿರುವುದನ್ನು ನೋಡಿದ ಕನ್ನಡಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಜಪಾನ್ ಮಹಿಳೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ಆಕೆ ಕನ್ನಡ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
