ರೈಲಿನಲ್ಲಿ ಪ್ರಯಾಣಿಸುತ್ತಿರುವ ಹುಡುಗನ ಆರೋಗ್ಯದಲ್ಲಿ ವ್ಯತ್ಯಾಸ ಕಂಡಿದ್ದು, ಕೂಡಲೇ ಸರಿಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ರೈಲ್ವೆ ವೈದ್ಯರು.ಸದ್ಯ ವಿಡಿಯೋ ವೈರಲ್ ಆಗಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನ ದವಡೆ ಜಾರಿ ನೋವಿನಿಂದ ನರಳುತ್ತಿರುವ ಸಮಯದಲ್ಲಿ ವೈದ್ಯರೊಬ್ಬರು ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಈ ಘಟನೆಯೂ ಕೇರಳದ ಪಾಲಾಕ್ಕಾಡ್ ಬಳಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ರೈಲ್ವೆ ವೈದ್ದಯರಾಗಿರುವ ಡಾ.ಜಿತಿನ್ ಪಿ.ಎಸ್. ಪ್ರಯಾಣಿಕನಿಗೆ ಅತೀ ಶೀಘ್ರದಲ್ಲಿ ಚಿಕಿತ್ಸೆಯನ್ನು ನೀಡಿ ಮುಂದಾಗುವ ದೊಡ್ಡ ಸಮಸ್ಯೆಯನ್ನು ಕಡಿಮೆ ಮಾಡಿದ್ದಾರೆ.
