ಕೊಪ್ಪಳ: ಸಿಪಿ ಯೋಗೇಶ್ವರ್‌ ಕಾಂಗ್ರೆಸ್‌ನತ್ತ ಒಲವು ತೋರಿಸಲು ನಾವು ಯಾವುದೇ ಆಪರೇಷನ್‌ ಮಾಡಿಲ್ಲವೆಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಕಾರ್ಯಕ್ರಮದಲ್ಲಿ ಹಾಜರಾಗಿ ಮಾತನಾಡಿದ ಗುಂಡೂರಾವ್‌, ಸಿಪಿ ಯೋಗೇಶ್ವರ್‌ ಅವರು ಕಾಂಗ್ರೆಸ್‌ ಪಕ್ಷದವರು.ಅವರ ಮನೆಗೆ ಮರಳಿ ಬಂದಿದ್ದಾರೆ ಅಷ್ಟೇ. ಅವರು ಪಕ್ಷದ ಅಭ್ಯರ್ಥಿಯಾದರೆ ನಮಗೆ ಸಂತೋಷ.ಯಾಕೆಂದರೆ ಅದು ಉಪಮುಖ್ಯಮಂತ್ರಿಗಳ ಜವಾಬ್ದಾರಿಯ ಕ್ಷೇತ್ರವೆಂದಿದ್ದಾರೆ.

ನಾವು ಯಾವುದೇ ರೀತಿಯ ಆಪರೇಷನ್‌ , ತಂತ್ರ, ಷಡ್ಯಂತ್ಗಳನ್ನು ಮಾಡಿಲ್ಲ. ಅವರಾಗಿಯೇ ಇಷ್ಟಪಟ್ಟು ಬಂದಿದ್ದಾರೆ. ಕಾಂಗ್ರೆಸ್‌ ಪಕ್ಷವೂ ಮೂರು ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುತ್ತೇವೆ.ಬಿಜೆಪಿಯವರು ಮಾಡಬಾರದ್ದನ್ನು ಮಾಡಿದ್ದಾರೆ.ಅವರು ನಮಗೆ ಬುದ್ದಿ ಹೇಳಬೇಕಾಗಿಲ್ಲವೆಂದು ಬಿಜೆಪಿಯ ವಿರುದ್ದ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *