ಜಾರ್ಖಂಡ್: ಬಿಜೆಪಿ ಪಕ್ಷವೂ ಅಧಿಕಾರಕ್ಕೆ ಬಂದ್ರೆ ಹುಸೈನಾಬಾದ್‌ನ್ನು ಜಿಲ್ಲೆಯಾಗಿ ಮಾಡುವುದಲ್ಲದೆ, ಆ ಜಿಲ್ಲೆಗೆ ರಾಮ ಇಲ್ಲವೇ ಕೃಷ್ಣನ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದು ಜಾರ್ಖಂಡ್ ವಿದಾನಸಭೆಯ ಎಲೆಕ್ಷನ್‌ಗೆ ಬಿಜೆಪಿಯ ಸಹ ಉಸ್ತರುವಾರಿಯಾಗಿರುವಂತಹ ಅಸ್ಸಾಂ ಸಿಎಂ ಹಿಮಂತ್ ಬಿಸ್ವಶರ್ಮಾ ತಿಳಿಸಿದ್ದಾರೆ.
ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಿಂದ ಅಕ್ರಮವಾಗಿ ಬಂದಿರುವ ವಲಸಿಗರನ್ನು ಹೊರಹಾಕಲಾಗುತ್ತದೆ ಎಂದಿದ್ದಾರೆ.
ಪಲಾಮು ಜಿಲ್ಲೆಯ ಜಾಪ್ಲಾ ಮೈದಾನದಲ್ಲಿ ನಡೆದ ಚುನಾವಣಾ ಸಮಾವೇಶದದಲ್ಲಿ ಮಾತನಾಡಿದ ಅವರು ಹುಸೈನಾಬಾದ್ನ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿರುವ ಕಮಲೇಶ್ ಸಿಂಗ್ರವರ ಪರವಾಗಿ ಮತಯಾಚನೆಯನ್ನ ನಡೆಸಿದ್ದಾರೆ ಎನ್ನಲಾಗಿದೆ.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಹುಸೈನಾಬಾದ್ ಅನ್ನು ಜಿಲ್ಲೆಯನ್ನಾಗಿ ಮಾಡಲಾಗುವುದು. ಅದಕ್ಕೆ ರಾಮ ಅಥವಾ ಕೃಷ್ಣನ ಹೆಸರು ಇಡಲಾಗುವುದು’ ಎಂದು ಹೇಳಿದ್ದಾರೆ.