ಚಿತ್ರದುರ್ಗ: ಉಪಚುನಾವಣೆಯ ಅಭ್ಯರ್ಥಿ ಹೆಸರನ್ನು ನಾಳೆ ಘೋಷಣೆ ಮಾಡಲಾಗ್ತದೆ.ಮೂರು ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಭರವಸೆಯಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ಸಿಗರ ಜೊತೆ ಸಿಪಿ ಯೋಗೇಶ್ವರ್ ಅವರಿಗೆ ಯಾವ ನಂಟಿಲ್ಲ ಎಂದು ಹೇಳಿದ್ದಾರೆ.
ಅಹಿಂದಾ ಹಣವನ್ನು ಲೂಟಿ ಮಾಡಿದ್ದೇವೆ ಎಂದು ಬಸವರಾಜ್ ಯತ್ನಾಳ್ ನೀಡಿರುವ ಹೇಳಿಕೆಗೆ ತಿರುಗೇಟನ್ನು ನೀಡಿರುವ ಸಿಎಂ, 1 ಸಾವಿರ ಕೋಟಿ ಕೊಟ್ಟರೆ ಸಿಎಂ ಆಗಬಹುದು? ಎಂದು ಹೇಳಿರುವ ಅವರಿಗೆ ಕೋಟಿ ಹಣ ಎಲ್ಲಿಂದ ಬರುತ್ತದೆ. ಯತ್ನಾಳ್ ಐದತ್ತು ಕೋಟಿ ಮಾತುಗಳನ್ನಾಡುವುದಿಲ್ಲ, ಬದಲಾಗಿ ಸಾವಿರ ಕೋಟಿ ಮಾತುಗಳನ್ನು ಮಾತಾಡ್ತಾರೆ. ರಾಜ್ಯ ಸರ್ಕಾರವನ್ನು ಉರುಳಿಸಲು ಬಸವರಾಜ್ ಯತ್ನಾಳ್ ಎಲ್ಲಿಂದ ಹಣವನ್ನು ತರ್ತಾರೆ. ಅವರ ಬಳಿ ಕಪ್ಪುಹಣ ಇರಬೇಕಲ್ವಾ?ಬಿಜೆಪಿಯವರ ಬಳಿಯಿರುವುದೇ ಕಪ್ಪುಹಣ ಎಂದಿದ್ದಾರೆ.
ರಾಜ್ಯದಲ್ಲಿ ಬೀಳುತ್ತಿರುವ ಮಳೆಯ ವಿಷಯಕ್ಕೆ ಮಾತನಾಡಿದ ಅವರು, ಬಂಗಾಳ ಕೊಲ್ಲಿಯಲ್ಲಿ ವಾಯುಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿದೆ ಎಂದು ಹೇಳಿದ್ದಾರೆ.