ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಮುಖಾಂತರ ನಡೆದ ಸಂಪುಟ ಸಭೆಯಲ್ಲಿ 43 ಕೇಸುಗಳನ್ನು ವಾಪಸ್ ತೆಗೆದುಕೊಳ್ಳಲಾಗಿದೆ.ಆ ಕೇಸುಗಳಲ್ಲಿ ಹುಬ್ಬಳ್ಳಿ ಕೇಸ್ ಕೂಡಾ ಇದೆ. ಆದ್ದರಿಂದ ಡಿಜೆಹಳ್ಳಿ,ಕೆಜಿ ಹಳ್ಳಿ ಪ್ರಕರಣದಲ್ಲಿ ಅರೆಸ್ಟ್ ಆದ ಅಮಾಯಕರ ಕೇಸನ್ನು ವಾಪಸ್ ತೆಗೆದುಕೊಳ್ಳಿ ಎಂದು ಮಾಜಿ ಸಚಿವ ಆರ್.ರೋಷನ್‌ಬೇಗ್ ಹೇಳಿದ್ದಾರೆ.
ಡಿಜೆಹಳ್ಳಿ,ಕೆಜಿ ಹಳ್ಳಿ ಕೇಸ್ ವಾಪಸ್‌ಗೆ ಮನವಿ ಮಾಡಿದ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಡಿಜೆಹಳ್ಳಿ,ಕೆಜಿ ಹಳ್ಳಿ ಪ್ರಕರಣದಲ್ಲಿ ಜೈಲು ಸೇರಿರುವ ಮಕ್ಕಳು, ತಂದೆತಾಯಿಯರನ್ನು ಭೇಟಿಯಾಗಿದ್ರು. 4 ವರ್ಷದಿಂದಲೂ ಜೈಲಿನಲ್ಲಿ ಇದ್ದವರು ಕಳ್ಳತನ ಮಾಡಿಲ್ಲ.ಹುಬ್ಬಳ್ಳಿಯ ಕೇಸುಗಳನ್ನು ಹಿಂಪಡಿದಿರುವುದರ ಬಗ್ಗೆ ಯೋಚಿಸಿ ಎಂದಿದ್ದಾರೆ.
ಈ ವಿಷಯದ ಕುರಿತು ಗೃಹಮಂತ್ರಿಗಳ ಜೊತೆಯಲ್ಲೂ ಚರ್ಚೆ ಮಾಡಿದ್ದೇನೆ.ತಪ್ಪು ಮಾಡಿ, ಗಲಭೆಯನ್ನು ಮಾಡಿದವರನ್ನೂ ಎಂದಿಗೂ ಬಿಡಬೇಡಿ. ಆದರೆ ಅಮಾಯಕರನ್ನು ಬಿಡುಗಡೆಮಾಡಿ ಎಂದಿದ್ದೇವೆ.ಅಮಾಯಕ ಮೇಲಿರುವ ಕೇಸನ್ನು ವಾಪಸ್ಸು ತೆಗೆದುಕೊಳ್ಳಲಿ ಎಂದು ಡಾ.ಪರಮೇಶ್ವರ್‌ರವರನ್ನು ಭೇಟಿ ಮಾಡಿದ ನಂತರ ಆರ್.ರೋಷನ್ ಬೇಗ್ ತಿಳಿಸಿದ್ದಾರೆ.