ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆಯ ಕಣ ರಂಗೇರಿದ್ದು,ಎಲ್ಲಾಪಕ್ಷದ ನಾಯಕರೂ ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದ್ದಾರೆ.ಈ ವಿಚಾರದ ಕುರಿತು ಡಿಸಿಎಂ ಡಿಕೆ ಶಿವಕುಮಾರ್‌ರವರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಸಭೆಯನ್ನು ನಡೆಸಲಾಗಿತ್ತು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಚನ್ನಪಟ್ಟಣದ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೇನೆ.ಪಕ್ಷಗಳಲ್ಲಿ ಯಾರು ಸ್ಪರ್ಧೆಗಿಳೀಯುತ್ತಾರೆಂಬುದನ್ನು ನೋಡಬೇಡಿ. ಜನತಾ ದಳದವರು ಸೀಟು ಬಿಟ್ಟುಕೊಡಲಿದ್ದಾರೆ ಎಂದು ಯಾರೋ ನನಗೆ ಸಭೆಯಲ್ಲಿರುವಾಗ ಕರೆ ಮಾಡಿ ತಿಳಿಸಿದ್ದಾರೆ  ಎಂದು ಡಿಕೆಶಿವಕುಮಾರ್‌ ಹೇಳಿದ್ದಾರೆ.

ನೆನ್ನೆ ರಾತ್ರಿಯೇ ಎಲ್ಲರೂ ಸಭೆಯ ಮೇಲೆ ಸಭೆಗಳನ್ನು ಮಾಡಿದ್ದಾರೆ. ಇವರು ಅಷ್ಟೊಂದು ವೀಕ್‌ ಆಗ್ತಾರೆ ಎಂದುಕೊಂಡಿರಲಿಲ್ಲ. ಅದು ಒಂದು ನೋಡೋಣ ಫೈಟ್‌ ಮಾಡಬಹುದು ಎಂದು ಅಂದ್ಕೊಂಡಿದ್ದೆ ಆದರೆ ಬಿಟ್ಟುಕೊಡ್ತೀದ್ದಾರೆ.ಜನರ ಸೇವೆಯನ್ನು ಮಾಡಲು ಚನ್ನಪಟ್ಟಣ ಕ್ಷೇತ್ರಕ್ಕೆ ಭೇಟಿ ನೀಡ್ತಿದ್ದೆ. ಅದಕ್ಕೆ ಇಷ್ಟೊಂದು ವೀಕ್‌ ಆಗ್ತಾರೆ ಎಂದು ನಾನು ಊಹೆನೂ ಕೂಡಾ ಮಾಡಿರಲಿಲ್ಲ. ಯುದ್ದ ಪ್ರಾರಂಭವಾಗುವ ಮುನ್ನವೇ ಶಸ್ತ್ರವನ್ನು ತ್ಯಾಗನಾ? ಎಂದು ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published. Required fields are marked *