ಮೈಸೂರು: ವಾಲ್ಮಿಕಿ ನಿಗಮದ ಹಗರಣ, ಮುಡಾ ಹಗರಣ,ಹೀಗೆ ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಬ್ಬ ದ್ರೋಹಿ ಸೇರ್ಪಡೆಯಾಗಿದ್ದು, ಕರ್ನಾಟಕ ರಾಜ್ಯವೂ ಮೋಸಗಾರರ, ದ್ರೋಹಿಗಳ ಸಂತೆಯಾಗಿದೆ,ಕಾಂಗ್ರೆಸ್ ಸರ್ಕಾರವೂ ಭ್ರಷ್ಟರಿಂದ ತುಂಬಿದೆ ಇದಕ್ಕೆ ಕಾರಣಕರ್ತರು ಸಿಎಂ ಸಿದ್ದರಾಮಯ್ಯ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಸುದ್ದಿಮಿತ್ರರೊಂದಿಗೆ ಮಾತನಾಡಿದ ಅವರು, ದೇಶವನ್ನು ಕಾಯುವ ಸೈನಿಕರ ಕುಲಕ್ಕೆ ಸಿಪಿ ಯೋಗೇಶ್ವರ್ ಅನ್‌ಫಿಟ್. ಸೈನಿಕರ ಕುಲಕ್ಕೆ ಕಂಟಕ. ಅವನನ್ನು ಸೈನಿಕ ಎಂದು ಕರೆಯಬೇಡಿ.ಹುಣಸೂರಿನ ಉಪಚುನಾವಣೆಯ ವೇಳೆ ಪಕ್ಷದ ಹಣವನ್ನು ಎತ್ತಿಕೊಂಡು ಓಡಿಹೋಗಿರುವ ಫ್ರಾಡ್ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿದ್ದಾನಾ? ಎಂದು ಏಕವಚನದಲ್ಲಿ ಹಿಗ್ಗಾ-ಮುಗ್ಗಾ ಜಾಡಿಸಿದ್ದಾರೆ.
ನಾನು ಪ್ರಾಮಾಣಿಕ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯನವರೇ ಈ ಉಪಚುನಾವಣೆಯಿಂದ ಸರಕಾರಕ್ಕ ಎಂಥಾ ನಷ್ಟವಾಗುವುದಿಲ್ಲ.ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡ್ಬಿಟ್ಟರು.ರಾಜ್ಯದ ಜನರನ್ನು ಮಂಗ ಮಾಡಲು ಹೊರಟಿರುವ ನಿಮಗೆ ಜನ ಪಾಠ ಕಲಿಸ್ತಾರೆ.ಸಿದ್ದರಾಮಯ್ಯ ಭ್ರಷ್ಟತೆಗೆ ಅಪ್ಪ. ಅಹಿಂದಾ ವರ್ಗದ ಜನರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ? ಎಂದು ವಾಗ್ದಾಳಿ ನಡೆಸಿದ್ದಾರೆ.