ಬೆಂಗಳೂರು: ಸಿಪಿ ಯೋಗೇಶ್ವರ್ ಬಿಜೆಪಿಗೆ ರಾಜೀನಾಮೆ ನೀಡಿದಾಗಲೇ ಎಲ್ಲರೂ ತಿಳಿದುಕೊಳ್ಳಬೇಕಾಗಿತ್ತು.ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಅನಿರೀಕ್ಷಿತವಲ್ಲ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿರುವುದು ಫ್ರೀ ಪ್ಲಾನ್. ನಿರೀಕ್ಷಿತವಾದದ್ದು, ಅದರಿಂದ ನನಗೆ ಯಾವುದೇ ರೀತಿಯ ಅಚ್ಚರಿಯಿಲ್ಲವೆಂದು ಹೇಳಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಸುಮಾರು 2 ತಿಂಗಳುಗಳಿಂದ ನನ್ನ ಹೆಸರು ಕೇಳಿಬರುತ್ತಿದೆ. ನಾನು ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ನನ್ನ ಪರ ಕೆಲಸ ಮಾಡುತ್ತೇನೆಂದು ಕಾರ್ಯಕರ್ತರು ಹೇಳಿದ್ದಾರೆ.ನಾನು ಸ್ಪರ್ಧಿಸಲು ಎನ್‌ಡಿ ಎ ಅನುಮತಿ ನೀಡಬೇಕು, ಅವರದೇ ಅಂತಿಮ ತೀರ್ಮಾನವಾಗಿದೆ. ತಾಳಿದವನು ಬಾಳಿಯಾನು ಎಂದು ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.ಆದ್ದರಿಂದ ನಾನು ಸುಮ್ಮನಾಗಿ ಕಾಯುತ್ತಿದ್ದನೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಉಪಚುನಾವಣೆಯ ಅಭ್ಯರ್ಥಿಯ ಚರ್ಚೆ ನಡೆಸುತ್ತಿದ್ದಾರೆ. ನೋಡೊಣ ಏನಾಗುತ್ತದೆಂದು ಹೇಳಿದ್ದಾರೆ.