ಬಿಗ್‌ಬಾಸ್ ಮನೆಯಲ್ಲಿ ಜಗಳಗಳು, ಕಣ್ಣೀರು, ಗುಂಪುಗಾರಿಕೆ , ಕೆಲವು ಸಲ ಎಮೋಷನಲ್, ಮತ್ತೆಕೋಪ, ಹೀಗೆ ಎಲ್ಲಾದರ ಮಿಕ್ಷರ್ ಆಗಿರುವ ದೊಡ್ಮನೆಯಿಂದ ಒಬ್ಬೊಬ್ಬರೇ ಆಚೆ ಹೋಗುತ್ತಿದ್ದಾರೆ. ಹೋದವರೆಲ್ಲ ಮನೆಯಲ್ಲಿನ ಅನುಭವನ್ನು ಹಂಚಿಕೊಂಡಿದ್ದಾರೆ .ಆ ಸರದಿಯಲ್ಲಿ ಇದೀಗ ಮಾಳು ನಿಪನಾಳದವರದ್ದಾಗಿದೆ.
ಬಿಗ್‌ಬಾಸ್ ಮನೆಯಲ್ಲಿ 3 ತಿಂಗಳುಗಳ ಕಾಲ ಇದ್ದು, ಎಲಿಮಿನೇಟ್ ಆಗಿ ಹೊರಬಂದಿರುವ ಮಾಳು ನಿಪನಾಳ್ ಹಲವಾರು ವಾಹಿನಿಗಳಿಗೆ ಸಂದರ್ಶನವನ್ನು ನೀಡಿದ್ದಾರೆ.ಒಂದು ವಾಹಿನಿಯಲ್ಲಿ ಒಂದು ರೀತಿ ಹೇಳಿಕೆಯನ್ನು ನೀಡಿದರೆ ಮತ್ತೊಂದರಲ್ಲಿ ಮತ್ತೊಂದು ರೀತಿ ಹೇಳಿಕೆಗಲನ್ನು ನೀಡುತ್ತಾ ಚರ್ಚೆಗೆ ಗ್ರಾಸವಾಗಿದ್ದಾರೆ.

ಮೊದಮೊದಲು ಮಾತನಾಡುವಾಗ ಬಿಗ್‌ಬಾಸ್ ಮನೆಯಲ್ಲಿ ಯಾರೇ ಗೆದ್ದರೂ ನಾನು ಒಪ್ಪಿಕೊಳ್ಳುವುದಿಲ್ಲೆನ್ನುವ ಹೇಳಿಕೆಯನ್ನು ನೀಡುತ್ತಾರೆ.ಆದರೀಗ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ. ಬೇರೆ ಬೇರೆ ಮಾಧ್ಯಮಗಳಲ್ಲಿ ಈ ಸಲ ಯಾರು ಗೆಲ್ತಾರೆ ಎನ್ನುವ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ನೀಡಿರಲಿಲ್ಲ.ಆದ್ರೆ ಈಗ ಗಿಲ್ಲಿ ಕಪ್ ಗೆಲ್ಲಬಹುದು ಎಂಬ ಹೇಲಿಕೆಯನ್ನು ನೀಡಿದ್ದಾರೆ.

ನನ್ನ ಮತ್ತು ಗಿಲ್ಲಿ ನಡುವೆ ಯಾವುದೇ ಭಿನ್ನಭಿಪ್ರಾಯವಿಲ್ಲ.ಹಾಗೆಯೇ ನಮ್ಮಿಬ್ಬರ ನಡುವೆ ಹೋಲಿಕೆಗಳು ಇಲ್ಲ.ಬ್ಬರೂ ಬೇರೆ ಬೇರೆ, ಇಬ್ಬರ ವ್ಯಕ್ತಿತ್ವವೂಬೇರೆಯಾಗಿದೆ. ಗಿಲ್ಲಿ ಕೆಟ್ಟವನಲ್ಲ ಎಲ್ಲರನ್ನೂ ನಕ್ಕು-ನಗಿಸುತ್ತಾನೆ. ಫಿಸಿಕಲ್ ಟಾಸ್ಕ್ ಆಡಲ್ಲ ಎನ್ನುವುದನ್ನು ಬಿಟ್ಟರೆ, ಅವರಲ್ಲಿ ಯಾವುದೇ ರೀತಿಯ ಕೊರತೆಯಿಲ್ಲ. ಆ ಕೊರತೆಯನ್ನು ಸರಿಪಡಿಸಿಕೊಂಡಿದ್ದೆ ಆದಲ್ಲಿ ಅವರು ಫಿನಾಲೆ ತುಲಿ ಕಪ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.

