ಹಾಸನ: ಹಾಸನದಲ್ಲಿ ಜಾತಿಗಣತಿ ಮಾಡಲು ತೆರಳಿದ್ದ ಶಿಕ್ಷಕಿಯ ಮೇಲೆ ಬೀದಿ ನಾಯಿಗಳು ಅಟ್ಯಾಕ್‌ ಮಾಡಿದ್ದು, ಶಿಕ್ಷಕಿಯನ್ನು ಬಚಾವ್‌ ಮಾಡಲು ಹೋದವರ ಮೇಲೂ ನಾಯಿಗಳು ದಾಳಿ ಮಾಡಿವೆ ಎನ್ನಲಾಗಿದೆ.

ಶಾಲಾ ಶಿಕ್ಷಕಿಯನ್ನು ಸೇರಿದಂತೆ 7 ಜನರ ಮೇಲೆ ಬೀದಿ ನಾಯಿಗಳು ದಾಳಿಯನ್ನು ನಡೆಸಿವೆ. ಶಿಕ್ಷಕಿಗೆ ಹೆಚ್ಚು ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಹಾಸನದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಆಸ್ಪತ್ರೆ ಸೇರಿದ ಶಿಕ್ಷಕಿಯನ್ನು ನೋಡಲು ಶಾಸಕ ಸುರೇಶ್‌ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *