ಚಿಕ್ಕಮಗಳೂರು : ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಬಿಜೆಪಿಗರು ತಂತ್ರಗಳಿಗೆ, ಷಡ್ಯಂತ್ರಗಳಿಗೆ ನಾನು ಹೆದರುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಸಿದ್ದರಾಮಯ್ಯನವರು ನೀಡಿದ ಹೇಳಿಕೆಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವ್ಯಂಗ್ಯ ಮಾಡುವುದರ ಮೂಲಕ ತಿರುಗೇಟನ್ನು ನೀಡಿದ್ದಾರೆ.
ಚಿಕ್ಕಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರಿಗೆ ಯಾರ ಭಯವಿಲ್ಲವಂತೆ. ಹಿಂದೆ ರಾಕ್ಷಸರು ಸಹ ಯಾರಿಗೂ ಹೆದರುವುದಿಲ್ಲ ಎನ್ನುತಿದ್ದರಂತೆ, ನಾವು ಸಿಎಂ ಅವರನ್ನು ಅದೇ ರೀತಿ ಅನ್ನಬಹುದಾ ಎಂದು ವ್ಯಂಗ್ಯ ಮಾಡಿದ್ದಾರೆ.
ಯಾರಿಗೂ ಭಯಪಡದಿದ್ದರೇನಂತೆ ಸಂವಿಧಾನ ಮತ್ತು ಕಾನೂನಿನ ಬಗ್ಗೆಯೂ ಭಯವಿಲ್ಲದ ಅವರು ರಾಜ್ಯದ ಜನತೆಗಿಂತಾ ದೊಡ್ಡವರಾ? ಯಾರಿಗೂ ಭಯವಿಲ್ಲವೆಂದು ಹೇಳ್ತಾರೆ, ರಾಕ್ಷಸರು ಕೂಡಾ ಯಾರಿಗೂ ಹೆದರುತ್ತಿರಲಿಲ್ಲ ಇವರನ್ನು ಹಾಗೇ ಅನ್ಕೋಬೇಕಾ? ಎಂದಿದ್ದಾರೆ.