ʼಕಾಂತಾರ ಚಾಪ್ಟರ್1ʼ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ರುಕ್ಮಣಿ ವಸಂತ ಸದ್ಯ ಮುಂಬೈನಲ್ಲಿ ಇದ್ದಾರೆ.

ಮುಂಬೈನಲ್ಲಿ ಬರ್ತಡೆ ಆಚರಿಸಿಕೊಂಡಿರುವ ರುಕ್ಕು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ತಲೆಗೆ ಸ್ಕಾರ್ಫ ಧರಿಸಿ ವೈಟ್ ಸ್ಕರ್ಟ್ ಟಾಪ್ ಹಾಕಿಕೊಂಡು ಮಿಂಚಿದ್ದಾರೆ.ಕಾಂತಾರ ಸಿನಿಮಾ ಯಶಸ್ವಿಯಾದ ಬಳಿಕ ಮುಂಬೈನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿರುವ ಇವರಿಗೆ ಹೆಚ್ಚು ಹೆಚ್ಚು ಹಿಂದಿ ಸಿನಿಮಾದ ಅವಕಾಶಗಳು ಹುಡುಕುಕೊಂಡು ಬರ್ತೀವೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದೇ ತಿಂಗಳು ಅಂದರೆ ಡಿಸೆಂಬರ್ 10ರಂದು ರುಕ್ಮಿಣಿ ವಸಂತರವರು ತಮ್ಮ ಹುಟ್ಟುಹಬ್ಬವನ್ನು ತಮ್ಮ ಸ್ನೇಹಿತರು ಮತ್ತು ಮುಂಬೈನ ಕುಟುಂಬದವರ ಜೊತೆ ಸೆಲೆಬ್ರೆಟ್ ಮಾಡಿ ನಂತರ ತಮ್ಮ ಮದುರವಾದ ಕ್ಷಣಗಳನ್ನು ಸೆರೆಹಿಡಿದು ತಮ್ಮ ಸಾಮಾಜಿಕ ಜಾಲಾತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂತಾರ ಸಿನಿಮಾ ಮುಗಿಸಿದ ನಂತರ ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕಿಲ್ಲ. ಈಗ ರುಕ್ಮಿಣಿಯವರಿಗಿರುವ ಕ್ರೇಜ್ ನೋಡಿದ್ರೆ ಮತ್ತೆ ಕನ್ನಡ ಸಿನಿಮಾಗಳನ್ನು ಮಾಡ್ತಾರಾ ಅಥವಾ ರಶ್ಮಿಕಾ ಮತ್ತು ಶ್ರೀಲೀಲಾ ರೀತಿ ಬೇರೆ ಭಾಷೆಗಳಮ್ಮು ಮಿಂಚಲು ಸಜ್ಜಾಗ್ತಾರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಎಲ್ಲಾ ಗೊಂದಲಗಳಿಗೆ ಮತ್ತು ಪ್ರಶ್ನೆಗಳಿಗೆ ಖುದ್ದು ರುಕ್ಮಿಣಿ ವಸಂತರವರೇ ಉತ್ತರ ನೀಡಬೇಕು.
