ಮಹಾನಟಿ, ಭರ್ಜರಿ ಬ್ಯಾಚುಲರ್ಸ್‌, ಹೀಗೆ ಸಹಜ ಅಭಿನಯದ ಮೂಲಕ ಜನರ ಮನಗೆದ್ದಿರುವ ಗಗನಾ ಸದ್ಯಕ್ಕೆ ರಾಜಕುಮಾರಿ ಸಿರಿಯಲ್‌ ನಲ್ಲಿ ನಟಿಸಿ ಪ್ರೇಕ್ಷಕರ ಮನಮಾತಾಗಿದ್ದಾಳೆ. ಈ ದಾರಾವಾಹಿಯು 100 ಸಂಚಿಕೆಗಳನ್ನು ಪೂರೈಸುವ ಹೊತ್ತಿಗೆ ದಾರಾವಾಹಿಯಲ್ಲೊಂದು ಮಹಾ ತಿರುವು ಮೂಡಿದೆ ಅದೇನೆಂದು ತಿಳಿಯೋಣ.

ಜೀ ಪವರ್‌ನಲ್ಲಿ ಪ್ರಸಾರವಾಗುತ್ತಿರುವ ರಾಜಕುಮಾರಿ ಧಾರಾವಾಹಿಯಲ್ಲಿ ಲಡ್ಡು ಪಾತ್ರವನ್ನು ಮಾಡುತ್ತಿದ್ದಾರೆ ಗಗನಾ. ಲಡ್ಡು ಗಂಡನ ಪಾತ್ರದ ಶೌರ್ಯ ಶಶಾಂಕ್‌ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.ಧಾರಾವಾಹಿಯ ನಾಯಕ ಪರಿಸ್ಥಿತಿಗೆ ಕಟ್ಟುಬಿದ್ದು,ಗಗನಾಗೆ ತಾಳಿ ಕಟ್ಟುತ್ತಾನೆ.ಅವಳನ್ನು ತಮ್ಮ ಮನೆಗೆ ಕೆಲಸದವಳನ್ನಾಗಿ ಕರೆದುಕೊಂಡು ಬರುತ್ತಾನೆ.

ಮನೆಯವರಿಗೆಲ್ಲಾ ಗಗನಾ ಗಂಡ ಯಾರು ಎನ್ನುವ ಸಂದೇಹ ಬಂದಾಗ ಅವಳು ಯಾರನ್ನೋ ನನ್ನ ಗಂಡ ಎಂದು ಹೇಳುತ್ತಾಳೆ.ಆಗ ಮನೆಯವರೆಲ್ಲಾ ಸೇರಿ ಮದುವೆ ಮಾಡಲು ಮುಂದಾಗುತ್ತಾರೆ. ಶೌರ್ಯ ಮತ್ತು ಅನು ಮದುವೆಯೂ ಆಗಲೇ ನಿಶ್ಚಯವಾಗಿರುತ್ತದೆ.ಎರಡು ಮದುವೆ ನಡೆಯುವ ಸಮಯದಲ್ಲಿ 1 ತಾಳಿಯಿರುತ್ತದೆ ಮತ್ತೊಂದನ್ನು ಶೌರ್ಯ ಬಚ್ಚಿಟ್ಟುಕೊಂಡಿರುತ್ತಾನೆ. ಆಗಲೇ ಲಡ್ಡು ಗಂಡ ನಾನೇ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮನೆಯವರು ಅಘಾತಕ್ಕೆ ಒಳಗಾಗುತ್ತಾರೆ.ಸಮಯದ ಒತ್ತಡಕ್ಕೆ ಸಿಲುಕಿದ ಶೌರ್ಯ ಅನು ಕುತ್ತಿಗೆಗೆ ತಾಳಿ ಕಟ್ಟುವ ಹಾಗೇ ಆಗುತ್ತದೆ.

ಇಬ್ಬರು ಹೆಣ್ಣು ಮಕ್ಕಳಿಗೆ ಒಬ್ಬ ಗಂಡ ಇದು ಸಿನಿಮಾಗಳಲ್ಲಿ ಮಾತ್ರ ನಡೆಯುತ್ತಿತ್ತು. ಆದ್ರೆ ಇದೀಗ ರಾಜಕುಮಾರಿ ಸಿರೀಯಲ್‌ನಲ್ಲಿ ಕೂಡಾ ನಡೆಯುವ ಹಾಗೆ ಮಾಡಿ ಕಿರುತೆರೆ ಇತಿಹಾಸದಲ್ಲಿ ಹೊಸ ಪ್ರಯತ್ನವಾಗಿದೆ.

ಲಡ್ಡು, ಶೌರ್ಯ ಮತ್ತು ಅನು ಈ ಮೂವರ ಮದುವೆಯ ಹೊಸ ಅಧ್ಯಾಯ ಹೇಗೆ ಇರುತ್ತೇ? ಎಂಬುದು ಮುಂದಿನ ಸಂಚಿಕೆಗಳಲ್ಲಿ ವೀಕ್ಷಿಸಬಹುದು.

Leave a Reply

Your email address will not be published. Required fields are marked *