ದೊಡ್ಮನೆಗೆ ಒಬ್ಬ ವಿಶೇಷ ಸೆಲೆಬ್ರಿಟಿಯೊಬ್ಬರ ಆಗಮನವಾಗಿದ್ದು, ಸ್ಪರ್ಧಿಗಳ ಜೊತೆ ತಮ್ಮ ಪ್ರೀತಿಯ ಅನುಭವವನ್ನು ಹಂಚಿಕೊಂಡಿದ್ದು, ಸ್ಪರ್ಧಿಗಳಿಗೆ ಹೊಸ ವಾತವರಣವನ್ನು ಸೃಷ್ಟಿಸಿದ್ದಾರೆ.

ಹೌದು ಬಿಗ್‌ಬಾಸ್‌ ಮನೆಯಲ್ಲಿ ಸದಾ ಟಾಸ್ಕ್‌, ಜಗಳ, ಕಿರಿಕಿರಿ, ಹೀಗೆ ಒಂದಲ್ಲಾ ಒಂದು ವಿಷಯವನ್ನಿಟ್ಟುಕೊಂಡು ಹಗ್ಗ-ಜಗ್ಗಾಟ ನಡೆಯುತ್ತಿರುತ್ತದೆ. ಹೀಗೆ ರಣರಂಗವಾಗಿರುವಂತಹ ಬಿಗ್‌ಬಾಸ್‌ ಮನೆಯನ್ನು ಕ್ರೇಜಿಸ್ಟಾರ್‌ ರವಿಚಂದ್ರನ್‌ರವರು ಪ್ರೇಮಲೋಕವನ್ನಾಗಿ ಮಾಡಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕವನ್ನು ಸೃಷ್ಟಿಸಿ, ತಮ್ಮ ಪ್ರೇಮ-ಪ್ರಣಯದ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದ ರವಿಚಂದ್ರನ್‌ರವರ ನಿಜ ಜೀವನದ ಪ್ರೀತಿ ಹೇಗಿತ್ತು ಎಂಬುದನ್ನು ತಿಳಿಯಬೇಕೆಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಅವರ ಅಭಿಮಾನಿಗಳೆಲ್ಲರಿಗೂ ಕುತೂಹಲವಿದ್ದೇ ಇರುತ್ತದೆ. ಅದನ್ನು ಲೈವಾಗಿ ಕೇಳುವ ಅವಕಾಶ ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆ ಲಭ್ಯವಾಗಿದೆ.

ಬಿಗ್‌ಬಾಸ್‌ ಮನೆಯ ಎಲ್ಲಾ ಸ್ಪರ್ಧಿಗಳನ್ನೆಲ್ಲಾ ಕೂರಿಸಿ ತಮ್ಮ ಕಾಲೇಜ್‌ ಡೇಸ್‌ಗಳ ಲವ್‌ಸ್ಟೋರಿಯನ್ನು ಮನಬಿಚ್ಚಿ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಡಾ.ರಾಜ್‌ಕುಮಾರ್‌ ನಟಿಸಿರುವ ನಾ ನಿನ್ನ ಬಿಡಲಾರೆ ಸಿನಿಮಾದಲ್ಲಿ ಅವರು ಓಡಿಸುತ್ತಿದ್ದ ಬೈಕ್‌ ತೆಗೆದುಕೊಂಡು ಜುಮ್‌ ಎಂದು ಕಾಲೇಜುಗೆ ಎಂಟ್ರಯಾದೆ. ಅಲ್ಲೇ ಇದ್ದ 10-15 ಹುಡುಗಿಯರು ನನ್ನ ಬೈಕ್‌ ಶಬ್ದಕ್ಕೆ ನನ್ನ ಕಡೆ ನೋಡುತ್ತಿದ್ದರು. ಆ ಗುಂಪಿನಲ್ಲಿದ್ದ ಹುಡುಗಿ ನನ್ನನ್ನು ತಿರುಗಿ ತಿರುಗಿ ನೋಡ್ತಾಳೆ ಆ ಸೀನ್‌ ಮತ್ತೆ ಆ ಕ್ಷಣವನ್ನು ನಾನಿವತ್ತಿನವರೆಗೂ ಮರೆತಿಲ್ಲ.ನಾನು ಮೊದಲು ಲವ್‌ನಲ್ಲಿ ಬಿದ್ದ ಹುಡುಗಿಯವಳು ಎಂದು ಹೇಳುತ್ತಾರೆ.

ʼಆ ಹುಡುಗಿಗೆ ಪ್ರಪೋಸ್‌ ಮಾಡಲು 1 ವರ್ಷವಾಯಿತು. ಕಣ್-ಕಣ್ಣಲ್ಲೇ 1 ವರ್ಷ ಪ್ರೀತಿ ಮಾಡಿದ್ವೀ. ಒಮ್ಮೆ ಅವಳನ್ನು ಮಾತನಾಡಿಸುವ ಮನಸ್ಸು ಮಾಡಿ ಕಾಲೇಜಿಗೆ ಕಾರು ತೆಗೆದುಕೊಂಡು ಹೋಗಿದ್ದೇ. ನಡೆದುಕೊಂಡು ಹೋಗುತ್ತಿದ್ದ ನನ್ನುಡುಗಿಯ ಬಳಿ ಕಾರು ನಿಲ್ಲಿಸಿ ನಿಮ್ಮನ್ನು ಡ್ರಾಪ್‌ ಮಾಡಬಹುದಾ ಎಂದು ಕೇಳಿದೆ. ಆದರೆ ಅವಳು ನೋ ಥ್ಯಾಂಕ್ಸ್‌ ಎಂದೇಳಿ ಹೊರಟು ಹೋದಳು. ಅಷ್ಟೇ ನೆಕ್ಸ್ಟ್‌ ದಿನದಿಂದ ಕಾಲೇಜಿಗೆ ಹೋಗಿಲ್ಲ. ಒಂದು ವಾರ ಕಾಲೇಜಿನ ಕಡೆ ತಲೆ ಹಾಕಿ ಮಲಗಿಲ್ಲ. ಒಂದು ದಿನ ನಮ್ಮ ಲ್ಯಾಂಡ್‌ಲೈನ್‌ ಫೋನಿಗೆ ಕಾಲ್‌ ಬರುತ್ತೆ. ನನ್ನ ನಂಬರನ್ನು ಕಲೆಕ್ಟ್‌ ಮಾಡಿ ಅವಳೇ ಕಾಲ್‌ ಮಾಡಿದ್ದಳು. ಆಗಿನಿಂದ ಅವಳು ನಾನೂ ಮಾತನಾಡಲು ಪ್ರಾರಂಭಿಸಿದೆವು. ಎಂದು ತಮ್ಮ ಪ್ರೇಮ ಹೇಗಾಯಿತೆಂಬುದನ್ನು ಸ್ಪರ್ಧಿಗಳ ಮುಂದೆ ಬಹಿರಂಗಪಡಿಸಿದ್ದಾರೆ.

ಕ್ರೇಜಿಸ್ಟಾರ್‌ ಪ್ರೇಮ ಕಥೆಯನ್ನು ಕೇಳಿದ ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳು ಫುಲ್‌ ಥ್ರಿಲ್‌ ಆಗಿದ್ದಾರೆ.

Leave a Reply

Your email address will not be published. Required fields are marked *