ನ್ಯಾಷನಲ್ ಕ್ರಶ್ ಎಂದು ಬಿರುದು ಪಡೆದುಕೊಂಡಿರುವ ರಶ್ಮಿಕಾ ಮಂದಣ್ಣ ವಿಭಿನ್ನ ಪಾತ್ರದಲ್ಲಿ ನಟಿಸುವುದರ ಮೂಲಕ ಮನೆಮಾತಾಗಿದ್ದಾರೆ. ಈಗ ಮತ್ತೊಂದು ಹಿಂದಿ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದು ,ಆ ಸಿನಿಮಾದ ಪಸ್ಟ್ ಲುಕ್ ರಿಲೀಸ್ ಆಗಿದೆ. ಹಿಂದಿ ಸಿನಿಮಾ ಥರ್ ಅಕ್ಟೋಬರ್ ತಿಂಗಳಲ್ಲಿ ತೆರೆಕಾಣಲಿದೆ ಎಂದು ತಿಳಿದುಬಂದಿದೆ.
ರಶ್ಮಿಕಾ ಮಂದಣ್ಣ ಮುಖ್ಯಪಾತ್ರಧಾರಿಯಾಗಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಪರೇಶ್ ರಾವಲ್ ಕೂಡಾ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಈ ಸಿನಿಮಾದಲ್ಲಿ ಆಯುಷ್ಮಾನ್ ರಕ್ಷಕ್ ಅಲೋಕ್ ಪಾತ್ರದಲ್ಲಿ ನಟಿಸುತ್ತಿದ್ದು, ರಶ್ಮಿಕಾ ತಡಾಕಾ ಹೆಸರಿನ ಪಾತ್ರವನ್ನು ನಿಭಾಯಿಸಲಿದ್ದರೆ ಎಂದು ತಿಳಿದುಬಂದಿದೆ.
