ಬೆಂಗಳೂರು: ನಟ ವಿಷ್ಣುವರ್ಧನ್‌ ಸ್ಮಾರಕ ನೆಲಸಮ ಮಾಡಿರುವ ವಿಚಾರಕ್ಕೆ ಎಲ್ಲಾ ಕಲಾವಿದರು, ನಟ-ನಟಿಯರು , ಅಭಿಮಾನಿಗಳಿಗೆ ಅಫಾತದ ವಿಚಾರವಾಗಿತ್ತು. ಈ ವಿಚಾರದ ಕುರಿತು ಸೋಷಿಯಲ್‌ ಮೀಡಿಯಾಗಳಲ್ಲಿ ಚರ್ಚೆಗಳು ನಡೆದಿತ್ತು.

ಆಗಸ್ಟ್‌ 8ರಂದು ಎಲ್ಲರೂ ವರಮಹಾಲಕ್ಷ್ಮಿ ಹಬ್ಬದ ಸಡಗರದಲ್ಲಿರುವ ಸಮಯದಲ್ಲೇ ರಾತ್ರೋ ರಾತ್ರಿ ವಿಷ್ಣು ಸ್ಮಾರಕ ನೆಲಸಮವಾಗಿರುವ ವಿಷಯ ತಿಳಿದ ಕೂಡಲೇ ಅಭಿಮಾನಿಗಳು ಆಕ್ರೋಶಕ್ಕೆ ಕಾರಣವಾಗಿತ್ತು.ಕಿಚ್ಚ ಸುದೀಪ್‌ ಕೂಡಾ ಬೇಸರ ವ್ಯಕ್ತಪಡಿಸಿ ಮುಂದೆ ನಾವೇನು ಮಾಡಬೇಕೆಂದು ನಮಗೆ ತಿಳಿದಿದೆ, ನಾವು ಮಾಡೇ ಮಾಡ್ತೀವಿ ಎಂದಿದ್ದರು. ಅದರಂತೆಯೇ  ಕಿಚ್ಚ ಸುದೀಪ್‌ ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಭೂಮಿಯನ್ನು ಖರೀದಿ ಮಾಡಿದ್ದಾರೆ.‌

Leave a Reply

Your email address will not be published. Required fields are marked *