ಬೆಂಗಳೂರು: ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಸ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿರುವ ಒಂದು ದೃಶ್ಯದಿಂದ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.
ಕೆಲವರು ಯಶ್ ನಟನೆಯ ಚಿರವು ವಿಭಿನ್ನ ಶೈಲಿಯಲ್ಲಿರುವುದರಿಂದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಈ ಸಿನಿಮಾದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಟಾಕ್ಸಿಕ್ ಸಿನಿಮಾದ ದೃಶ್ಯವನ್ನಿಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ.

ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ ತಂದೆ ತಾಯಿ ಮುಂದೆ ಅವರು ಕೂತು ನೋಡಲಾಗದ ಸಿನಿಮಾವನ್ನು ನಾನು ಮಾಡುವುದಿಲ್ಲ ಎಂಬ ಮಾತುಗಳನ್ನು ಕೆಲವರು ನೆನಪು ಮಾಡುತ್ತಿದ್ದಾರೆ.ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್‌ಗಳನ್ನು ಮಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಕ್ಸಿಕ್ ಸಿನಿಮಾದ ಟೀಸರ್‌ನಲ್ಲಿರುವ ಅಶ್ಲೀಲ ದೃಶ್ಯದ ವಿರುದ್ದ ಅಮ್‌ಆದ್ಮಿ ಪಾರ್ಟಿಯ ಯು ಘಟಕ ದೂರನ್ನು ನೀಡಿದ್ದು, ಇದರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
