ನಟಿ ರಮ್ಯಾ ರೀತಿಯಲ್ಲಿಯೇ ವಿಜಯಲಕ್ಷ್ಮೀಯವರಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಕೆಟ್ಟ ಕೆಟ್ಟ ಕಮೆಂಟ್‌ ಮಾಡಲಾಗಿರುವ  ವಿಚಾರದ ಕುರಿತಂತೆ ತನಿಖೆ ನಡೆಸುವಂತೆ ಮಹಿಳಾ ಆಯೋಗ ನಗರದ ಪೊಲೀಸ್‌ ಆಯುಕ್ತರಿಗೆ ಸೂಚನೆಯನ್ನು ನೀಡಿದೆ.

ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ, ನಟಿ ರಮ್ಯಾ ರೀತಿಯಲ್ಲಿಯೇ ದರ್ಶನ್‌ ಪತ್ನಿಗೂ ಅಸಭ್ಯವಾಗಿ, ಅಶ್ಲೀಲ ಸಂದೇಶಗಳನ್ನು ಕಿಡಿಗೇಡಿಗಳು ಮಾಡಿದ್ದಾರೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಿ 15 ದಿನಗಳೊಳಗಾಗಿ ವರದಿಯನ್ನು ಒಪ್ಪಿಸುವಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಪತ್ರವನ್ನು ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

ನಟಿ ರಮ್ಯಾ, ವಿಜಯಲಕ್ಷ್ಮೀ ದರ್ಶನ್‌ , ಮಾತ್ರವಲ್ಲದೇ ಬೇರೆ ಯಾವುದೇ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದ್ರೆ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ.ಸೋಷಿಯಲ್‌ ಮೀಡಿಯಾಗಳನ್ನು  ಹೆಣ್ಣುಮಕ್ಕಳ ತೇಜೊವದೆ ಮಾಡಲು ಬಳಸಬಾರದು. ಅವಹೇಳನವಾಗಿ, ತುಚ್ಚವಾಗಿ ಮಾತನಾಡಿದರೆ ಜೈಲುಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಎಚ್ಚರಿಕೆನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *