ಕನ್ನಡ ಚಲನಚಿತ್ರರಂಗದಲ್ಲಿ ಪ್ರತಿವರ್ಷವೂ ಸ್ಟಾರ್‌ಗಳ ಚಲನಚಿತ್ರಗಳು ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನಗಳನ್ನು ಕಂಡರೆ ಮತ್ತೆ ಕೆಲವು ಚಿತ್ರಗಳು ಪರ್ವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪನ್ನು ಮೂಡಿಸಿರುತ್ತವೆ.

ಪ್ರತಿ ವರ್ಷದಂತೆಯೇ ಈ ವರ್ಷದಲ್ಲೂ ಹಲವು ಚಿತ್ರನಟರ ಸಿನಿಮಾಗಳು ಬಿಡುಗಡೆಯಾಗಿದ್ದು ಯಾವ ಸ್ಟಾರ್‌ ನಟರ ಸಿನಿಮಾ ಹೆಚ್ಚು ಪ್ರಸಿದ್ದಿಯನ್ನು ಪಡೆದುಕೊಂಡು ಹೆಚ್ಚು ಕಲೆಕ್ಷನ್‌ ಮಾಡಿದೆ ಎಂಬ ಚರ್ಚೆಗಳು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ನೋಡೋಣ ಯಾವ ನಟನ ಸಿನಿಮಾ ಯಾವ ನಟನ ಸಿನಿಮಾವನ್ನು ಹಿಂದಿಕ್ಕಿದೆ ಎಂಬುದರ ಖಲಕ್.‌

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ನಟ ದರ್ಶನ್‌ ನಟನೆಯ ದಿ ಡೆಚಿಲ್‌ ಸಿನಿಮಾಬಿಡುಗಡೆಯಾದ ನಂತರ, ಸುದೀಪ್‌ ನಟನೆಯ ಮಾರ್ಕ್‌ ಸಿನಿಮಾ ಬಿಡುಗಡೆಯಾಗಿದ್ದು, ಅದೇ ರೀತಿ ಶಿವಣ್ಣ ಉಪೇಂದ್ರ ಮತ್ತು ರಾಜ್‌ಬಿ ಶೆಟ್ಟಿ ಈ ಮೂರು ನಟರು ನಟಿಸಿರುವ 45 ಸಿನಿಮಾ ಕೂಡಾ ಈ ಡಿಸೆಂಬರ್‌ ತಿಂಗಳಿನಲ್ಲಿ ರಿಲೀಸ್‌ ಆಗಿದೆ.

ಈ ಎಲ್ಲಾ ಸ್ಟಾರ್‌ ನಟರ ಸಿನಿಮಾಗಳು ರಿಲೀಸ್‌ ಆಗಿ ಬಾಕ್ಸ್‌ ಆಫೀಸಿನಲ್ಲಿ ಕ್ರಾಂತಿ ಮಾಡಿವೆ ಎನ್ನಲಾಗಿದೆ. ವರ್ಷವಿಡೀ ಚಿತ್ರಗಳು ಗೆಲ್ಲುವುದಕ್ಕಿಂತಲೂ ಸೋಲನ್ನು ಅನುಭವಿಸಿದ ಚಿತ್ರರಂಗ ಈ 3 ಸ್ಟಾರ್‌ ನಟರ ಚಿತ್ರಗಳನ್ನು ಗೆಲ್ಲಿಸುವುದರ ಮೂಲಕ ಸುಧಾರಿಸಿದೆ ಎನ್ನಲಾಗಿದೆ.

ಯಾವ ಚಿತ್ರ ಎಷ್ಟು ಎಷ್ಟು? ಗಳಿಕೆ ಮಾಡಿದೆ ಎಂದು ಎಲ್ಲರೂ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ.ಮೊದಲು ಬಿಡುಗಡೆಯಾದ ಡೆವಿಲ್‌ ಸಿನಿಮಾದ ಕಲೆಕ್ಷನ್‌ 13.8 ಕೋಟಿ ಎಂದು ನಿರ್ಮಾಪಕರ ಅಂದಾಜಿನ ಪ್ರಕಾರ ಹೇಳಲಾಗಿತ್ತು. ನಂತರ ಚಿತ್ರ ಎಷ್ಟು ಗಳಿಸಿತು ಎಂಬುದನ್ನು ಚಿತ್ರತಂಡ ಮಾಹಿತಿ ನೀಡಿಲ್ಲ.

ಸ್ಯಾಕ್‌ನಿಲ್ಕ್‌ ವೆಬ್‌ಸೈಟ್‌ ವರದಿ ಮಾಡಿರುವ ಪ್ರಕಾರ ʼದಿ ಡೆವಿಲ್‌ ಚಲನಚಿತ್ರದ ಮೊದಲ ದಿನದ ಗಳಿಕೆ 10ಕೋಟಿ ರೂ ನೆಟ್‌ ಕಲೆಕ್ಷನ್‌ ಆಗಿತ್ತು.ಇದೇ ಜನಪ್ರಿಯ ವೆಬ್‌ಸೈಟ್‌ ಪ್ರಕಾರ ಮಾರ್ಕ್‌ ಚಿತ್ರದ ಮೊದಲ ದಿನದ ಕಲೆಕ್ಷನ್‌ ಮೊತ್ತವು 6.28ಕೋಟಿ ರೂ ಆಗಿತ್ತು. ಅದೇ ರೀತಿ ವೆಬ್‌ಸೈಟ್‌ ಪ್ರಕಾರ 45 ಚಿತ್ರದ ಮೊದಲ ದಿನದ ಕಲೆಕ್ಷನ್‌ ಮೊತ್ತವು 4.25 ಕೋಟಿ ರೂ ಆಗಿದೆ ಎಂದು ಮಾಹಿತಿ ನೀಡಿದೆ.

ಡಿಸೆಂಬರ್‌ನಲ್ಲಿ ಕ್ರಾಂತಿ ಮಾಡಲು ಬಂದಿರುವ 3 ಸಿನಿಮಾಗಳಲ್ಲಿ ಅತಿ ಹೆಚ್ಚು ಮೊತ್ತವನ್ನು ಕಲೆಹಾಕಿರುವ ಮೊದಲ ಚಲನಚಿತ್ರವಾಗಿ ʼದಿಡೆವಿಲ್‌ʼ ಗುರುತಿಸಿಕೊಂಡರೆ, ಎರಡನೇ ಸ್ಥಾನವನ್ನು ʼಮಾರ್ಕ್‌ʼ ಸಿನಿಮಾ ಅಲಂಕರಿಸಿದೆ, ಇನ್ನೂ 3 ನಟರೂ ಇಂದೇ ಸಿನಿಮಾದಲ್ಲಿ ನಟಿಸಿರುವ 45 ಚಿತ್ರವೂ ಮೂರನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *