ಚಳಿಗಾಲ ಬಂದರೆ ಡ್ರೈ ಸ್ಕಿನ್ ಇರುವವರು ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಬಾಡಿಲೋಷನ್ ಹಚ್ಚದಿದ್ರೆ ಅವರ ಕೈಕಾಲುಗಳು ಒಣಗಿ ಶುಷ್ಕವಾಗಿ ನವೆ, ತುರಿಕೆ, ಕೈಕಾಲು ಬೆಳ್ಳಬೆಳ್ಳಗೆ ಕಾಣುವುದು.
ಫುಲ್ ಡ್ರೈ ಸ್ಕಿನ್ ಇರುವವರು ಎಲ್ಲರ ರೀತಿ ಅರಾಮಾಗಿ ಇರಲು ಅವರಿಗೆ ಸ್ವಲ್ಪ ಕಷ್ಟವಾಗುತ್ತದೆ ಏಕೆಂದರೆ ಯಾವುದೇ ತೊಂದರೆಯಿಲ್ಲದೆ ಪ್ರತಿಯೊಂದು ಸರಿಯಾಗಿದ್ದರೆ ಮಾತ್ರ ನಮ್ಮ ಮನಸ್ಸು ಯಾವುದೊ ಒಂದು ವಿಷಯದ ಕಡೆ ಗಮನ ಹರಿಸುತ್ತದೆ.ಸ್ವಲ್ಪ ಏರುಪೇರಾದರೂ ಕೂಡಾ ನಮ್ಮ ಮನಸ್ಸು ಸ್ಥಿಮಿತದಲ್ಲಿರುವುದಿಲ್ಲ.

ಶುಷ್ಕ ಚರ್ಮ ಹೊಂದಿರುವವರು 3ರಿಂದ 4 ಲೀಟರ್ ನೀರನ್ನು ಕುಡಿಯಬೇಕು. ನಾರಿನಂಶ ಹೆಚ್ಚಿರುವ ಆಹಾರ ಪದಾರ್ಥವನ್ನು ತೆಗೆದುಕೊಳ್ಳಬೇಕು.

ಸೀಜನ್‌ನಲ್ಲಿ ಸಿಗುವ ಹಣ್ಣು,ತರಕಾರಿಗಳನ್ನು ಯಥೇಚ್ಚವಾಗಿ ಉಪಯೋಗಿಸಬೇಕು.

ಮೊಸರು, ಮಜ್ಜಿಗೆ, ಎಳನೀರು, ನಿಂಬೆ ಹಣ್ಣಿನ ಶರಬತ್ತು, ಕರಬೂಜ ಈ ರೀತಿಯ ಹಣ್ಣುಗಳಿಂದ ಪಾನೀಯಗಳನ್ನು ತಯಾರಿಸಿ ಸೇವಿಸಿದರೆ ಕ್ರಮೇಣ ತ್ವಚೆ ಹೊಳಪನ್ನು ಪಡೆಯುತ್ತದೆ.

ಇನ್ನೂ ತ್ವಚೆಯ ವಿಷಯಕ್ಕೆ ಬಂದರೆ ಮಾರುಕಟ್ಟೆಗಳಲ್ಲಿ ಹಲವಾರು ರೀತಿಯ ಕ್ರೀಮುಗಳು ಬಂದಿವೆ.ನಮ್ಮ ತ್ವಚೆಗೆ ಹೊಂದುವಂತಹ ಕ್ರೀಮನ್ನು ಆಯ್ಕೆ ಮಾಡಿಕೊಂಡು ನಿಯಮಿತವಾಗಿ ಹಚ್ಚುತ್ತಾ ಬಂದರೆ ಕ್ರಮೇಣ ತ್ವಚೆ ತೇವಾಂಶವನ್ನು ಕಾಯ್ದುಕೊಂಡು ಮೃದುವಾಗುತ್ತದೆ.

ಒಣತ್ವಚೆಯಿಂದ ಮುಖದಲ್ಲಿ ತುರಿಕೆ, ಇರಿಟೇಷನ್ ಆಗುತ್ತಿದ್ದರೆ ಮುಖಕ್ಕೆ ರೋಸ್ ವಾಟರ್ ಹಾಕಿ ಮಸಾಜೆ ಮಾಡಿಕೊಂಡರೆ ಸ್ವಲ್ಪ ಕಮ್ಮಿಯಾಗುತ್ತದೆ.

ರಾತ್ರಿ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಬೆಳಗ್ಗೆ ಸ್ನಾನ ಮಾಡುವುದರಿಂದ ತ್ವಚೆ ತೇವವನ್ನು ಕಾಪಾಡಿಕೊಳ್ಳುತ್ತದೆ.ಕೊಬ್ಬರಿ ಎಣ್ಣೆಗಿಂತ ಒಳ್ಳೆಯ ಮಾಯಿಶ್ಚರೈಸರ್ ಬೇರೊಂದಿಲ್ಲ.

ಮಾರ್ಕೆಟ್‌ನಲ್ಲಿ ಸಿಗುವ ಒಳ್ಳೆಯ ಪ್ರಾಡಕ್ಟ್‌ಗಳನ್ನು ಬಳಸಿ ಮತ್ತು ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಿ.
