ಬೆಂಗಳೂರು: ನಗರದಲ್ಲಿ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಕೆಲವು ಸಿಬ್ಬಂದಿಗಳು ಗೈರಾಗಿದ್ದಾರೆ.ಹೀಗೆ ಗೈರಾದ ಸಿಬ್ಬಂದಿಗಳಿಗೆ ವೇತನವನ್ನು ನೀಡದಿರಲು ನಿರ್ಧಾರವನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
2300 ಸಿಬ್ಬಂದಿಗಳು ಗೈರಾಗಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ 18000 ಮಂದಿ ಮಾತ್ರ ಹಾಜರಾಗಿದ್ದಾರೆ.ಆದ್ದರಿಂದ ಜಾತಿಗಣತಿ ಸಮೀಕ್ಷೆಗೆ ಗೈರಾಗಿರುವ ಸಿಬ್ಬಂದಿಗಳ ವೇತನವನ್ನು ಕಡಿತಗೊಳಿಸಲು ಸರ್ಕಾರ ಚಿಂತನೆಯನ್ನು ನಡೆಸುತ್ತಿದೆ ಎನ್ನಲಾಗಿದೆ.
ಜಾತಿಗಣತಿ ಸಮೀಕ್ಷೆಯನ್ನು ಆನ್ಲೈನ್ನಲ್ಲಿಯೂ ಕೂಡಾ ಭಾಗವಹಿಸಬಹುದು.
kscbcselfdeclaration.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ, ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ. ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿಯನ್ನು ಪಡೆಯಲು ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ.
