ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯ್ಲಲಿ ಗಾಯಗೋಮಡು ಪಂದ್ಯದಿಂದ ಹೊಗಿದ್ದ ಇಂಡಿಯಾದ ಏಕದಿನ ಕ್ರಿಕೆಟ್‌ನ ಉಪನಾಯಕ ಶ್ರೇಯಸ್ ಅಯ್ಯರ್ ಮತ್ತೆ ತಂಡಕ್ಕೆ ಮರಳಿದ್ದು, ಅವರನ್ನು ಮುಂದಿನ ಪಂದ್ಯಗಳಿಗೆ ಮುಂಬೈ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯನ್ನು ಮಾಡಲಾಗಿದೆ.
ದಕ್ಷಿಣ ಆಫ್ರೀಕಾ ವಿರುದ್ಧದ ಏಕದಿನ ಸರಣಿಯಲ್ಲಿ ಗೈರಾಗಿದ್ದ ಅವರು, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬರುವ ನ್ಯೂಜಿಲ್ಯಾಂಡ್ ಏಕದಿನ ಸರಣಿಯಲ್ಲಿ ಭಾರತ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ವಿಜಯ್ ಹಜಾರೆ ಟ್ರೋಫಿಯ ಉಳಿದ ಪಂದ್ಯಗಳಿಂದ ಹೊರ ಉಳಿದಿರುವ ಮುಂಬೈ ತಂಡದ ನಾಯಕರಾದ ಶಾರ್ದೂಲ್ ಠಾಕೂರ್ ಬದಲಾಗಿ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
ಗಾಯಗೊಂಡಿರುವ ಶಾರ್ದೂಲ್ ಠಾಕೂರ್ ಸದ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಶ್ರೇಯಸ್ ಅಯ್ಯರ್ ತಂಡವನ್ನು ನಡೆಸಲಿದ್ದಾರೆ ಎಂದು ಸಂಜಯ್ ಪಾಟೀಲ್ ಪಿಐಟಿಗೆ ತಿಳಿಸಿದ್ದಾರೆ.

ನಾಳೆ ನಡೆಯಲಿರುವ ಗ್ರೂಪ್ ಸಿ ಟೀಮ್‌ನಲ್ಲಿ ಹಿಮಾಚಲ ವಿರುದ್ಧ ಮತ್ತು ಜ.8ರಂದು ಪಂಜಾಬ್ ವಿರುದ್ಧ ನಡೆಯಲಿರುವ ಆಟದಲ್ಲಿ ಮುಂಬೈ ತಂಡವನ್ನು ಶ್ರೇಯಸ್ ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
