ಮುಂಬೈ: ಮುಂಬರುವ ಐಪಿಎಲ್ 2026 ರ ಆವೃತ್ತಿಗೆ ಬಾಂಗ್ಲಾದೇಶದ ವೇಗಿ ಆಟಗಾರ ಮುಸ್ತಾಫಿಜುರ್ ರೆಹಮಾನ್‌ರನ್ನು ತಂಡದಿಂದ ಹೊರಗಿಡಲು ಕೊಲ್ಕತ್ತಾ ನೈಟ್ ರೈಡರ್ಸ್ ಬಿಸಿಸಿಐಗೆ ತಿಳಿಸಿದೆ .
ಕೊಲ್ಕತ್ತಾ ನೈಟ್ ರೈಡರ್ಸ್ ನಿರ್ದೇಶನದಂತೆ ಬಾಂಗ್ಲದೇಶದ ಆಟಗಾರನನ್ನು ತಂಡದಿಂದ ಹೊರತೆಗೆಯಲಾಗಿದೆ. ಬಾಂಗ್ಲಾದೇಶದಲ್ಲಿ 2ವಾರದಲ್ಲಿ 4ಜನ ಹಿಂದೂಗಳ ಹತ್ಯೆಯಾದ ಕಾರಣ ಬಾಂಗ್ಲಾದಲ್ಲಿ ಹಿಂದೂ ವಿರೋಧಿ ಭಾವನೆಯಿದ್ದು, ಹಿಂದೂಗಳ ಮೇಲೆ ದೌರ್ಜನ್ಯ ಎಸಗಿರುವ ಪರಿಣಾಮ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಐಪಿಎಲ್ ಆವೃತ್ತಿಗಾಗಿ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್‌ನ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮುಸ್ತಾಫಿಜುರ್ ಅವರನ್ನು 9.20 ಕೋಟಿ ರೋಗಳಿಗೆ ಸಹಿಯನ್ನು ಮಾಡಿತ್ತು ಎನ್ನಲಾಗಿದೆ.
