ಬೆಂಗಳೂರು :ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರು ಸದಾ ತಮ್ಮ ಸರಳತೆ ಹಾಗೂ ಕಿರಿಯರನ್ನು ಪ್ರೋತ್ಸಾಹಿಸುವ ಗುಣದಿಂದಲೇ ಮನೆಮಾತಾದವರು. ಆದರೆ, ಅವರ ಇದೇ ಗುಣ ಇದೀಗ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕೇವಲ 4 ಚಿತ್ರಗಳನ್ನು ಮಾಡಿರುವ ತಮಿಳು ನಟ ಪ್ರದೀಪ್ ರಂಗನಾಥನ್ ಅವರನ್ನು ಶಿವಣ್ಣ ‘ಸರ್’ ಎಂದು ಕರೆದಿರುವುದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳು ನಟ ಪ್ರದೀಪ್ ರಂಗನಾಥನ್ ಅವರನ್ನು ಭೇಟಿಯಾದ ಶಿವಣ್ಣ, ಅವರನ್ನು ಹಾಡಿ ಹೊಗಳಿದ್ದಾರೆ. ಪ್ರದೀಪ್ ಅವರಿಗೆ ತಲೆಬಾಗಿ ನಮಸ್ಕರಿಸಿದ ಶಿವರಾಜ್‌ಕುಮಾರ್, “ನಾನು ನಿಮ್ಮ ಅಭಿಮಾನಿ. ನಟ ಧನುಷ್ ನನ್ನ ನೆಚ್ಚಿನ ನಟ, ನಿಮ್ಮನ್ನು ನೋಡಿದಾಗಲೆಲ್ಲ ನನಗೆ ಅವರನ್ನೇ ನೋಡಿದ ಹಾಗೆ ಎನಿಸುತ್ತದೆ” ಎಂದು ಹೇಳಿ ‘ಸರ್’ ಎಂದು ಸಂಭೋದಿಸಿದ್ದಾರೆ. ಶಿವಣ್ಣನ ಈ ನಡೆ ಇದೀಗ ಕನ್ನಡಿಗರಿಗೆ ತೀವ್ರ ಮುಜುಗರ ತಂದಿದೆ.

ಫ್ಯಾನ್ಸ್ ಗರಂ ಆಗಿದ್ದೇಕೆ?
ಶಿವಣ್ಣನ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. “ಶಿವಣ್ಣ, ನೀವು ಕನ್ನಡ ಚಿತ್ರರಂಗದ ದಿಗ್ಗಜ. ನೀವು ಬ್ಯಾಕ್ ಟು ಬ್ಯಾಕ್ 20 ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಾಗ ಈ ನಟ ಹುಟ್ಟೇ ಇರಲಿಲ್ಲ. ಕೇವಲ 4 ಚಿತ್ರಗಳನ್ನು ಮಾಡಿರುವ ಇಂತಹ ಕಿರಿಯ ನಟನಿಗೆ ನೀವು ತಲೆಬಾಗಿ ‘ಸರ್’ ಎನ್ನುವುದು ನಮಗೆ ಶೋಭೆ ತರುವುದಿಲ್ಲ. ವಿನಯ ಇರಬೇಕು, ಆದರೆ ನಮ್ಮ ಘನತೆಯನ್ನು ಬಿಟ್ಟುಕೊಡಬಾರದು” ಎಂದು ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ, ಪರಭಾಷಾ ನಟರ ಮುಂದೆ ನಮ್ಮ ಸ್ಟಾರ್ ನಟರು ತೋರುವ ಅತಿಯಾದ ವಿನಯವು, ಕನ್ನಡ ಸಿನಿ ಪ್ರೇಕ್ಷಕರ ಸ್ವಾಭಿಮಾನವನ್ನು ಕೆಣಕಿದಂತಾಗಿದೆ ಎಂಬ ಚರ್ಚೆ ಜೋರಾಗಿದೆ.
