ಬೆಂಗಳೂರು:ದಸರಾ ಉದ್ಘಾಟನೆಗೆ ಬೂಕರ್ ಅವಾರ್ಡ್ ವಿಜೇತೆ ಲೇಖಕಿ ಬಾನು ಮುಸ್ತಾಕ್‌ರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ವಾದ-ಪ್ರತಿವಾದಗಳು ನಡೆಯುತ್ತಿದ್ದು, ಕೆಲವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾನು ಮುಸ್ತಾಕ್ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾರು ಏನು ಮಾತನಾಡುತ್ತಾರೋ ಮಾತಾಡಿಕೊಳ್ಳಲಿ , ಸಮಯ ಬಂದಾಗ ಇದಕ್ಕೆಲ್ಲಾಉತ್ತರ ನೀಡುತ್ತೇನೆ.ನಾನು ಈ ಹಿಂದೆ ಏನು ಮಾತನಾಡಿದ್ದೇನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಲಿ ಎಂದು ಹೇಳಿದ್ದಾರೆ.
ನನ್ನನ್ನು ಯಾರೋ ವಿರೋಧ ಮಾಡುತ್ತಾರೆ ಎಂದು ನಾನು ಉತ್ತರ ಕೊಡಬೇಕಾ? ಮಾತನಾಡುವವರೆಲ್ಲಾ ಮಾತಾಡಿಕೊಳ್ಳಲಿ ಸಮಯ ಬಂದಾಗ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.
