ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದ ಆ ಅದ್ಭುತ ಕ್ಷಣಕ್ಕೆ ಅಭಿಮಾನಿಗಳು ಕಾಯುತ್ತಿದ್ದರು.
ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗನ್ನು ಆಯ್ಕೆ ಮಾಡಿಕೊಂಡಿದ್ದರು.ಪಸ್ಟ್ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಟೀಮ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ನುಗಳನ್ನು ಪಡೆದುಕೊಂಡಿತು.

155 ರನ್ ಟಾರ್ಗೆಟ್‌ನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಮೊದಲ 10 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. 10ಓವರ್‌ಗಳಲ್ಲಿ 75 ಎನ್ನುಗಳನ್ನು ಮಾತ್ರ ಪಡೆದುಕೊಂಡಿತ್ತು.ಉಳಿದ ಹತ್ತು ಓವರ್‌ಗಳಲ್ಲಿ 82 ರನ್ನುಗಳನ್ನು ಕಲೆಹಾಕುವುದರ ಮೂಲಕ ಜಯ ಸಾಧಿಸಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಇದು ಕೇವಲ ಒಂದು ಗೆಲುವಲ್ಲ, ಬದಲಾಗಿ ಆರ್‌ಸಿಬಿ ತಂಡದ ಪಾಲಿಗೆ ಒಂದು ದೊಡ್ಡ ತಿರುವು. ಮುಂಬೈ ಇಂಡಿಯನ್ಸ್‌ನಂತಹ ಬಲಿಷ್ಠ ತಂಡವನ್ನು ಸೋಲಿಸುವುದು ಯಾವಾಗಲೂ ಸವಾಲಿನ ಕೆಲಸ, ಆದರೆ ಆರ್‌ಸಿಬಿ ಬ್ಯಾಟರ್‌ಗಳು ಅದನ್ನು ಅತ್ಯಂತ ಆತ್ಮವಿಶ್ವಾಸದಿಂದ ನಿಭಾಯಿಸಿದರು.

ಈ ಇತಿಹಾಸ ನಿರ್ಮಾಣದಲ್ಲಿ ಆರ್‌ಸಿಬಿ ಬ್ಯಾಟರ್‌ಗಳ ಪಾತ್ರ ಅತಿ ದೊಡ್ಡದು. ಪಂದ್ಯದ ಕಠಿಣ ಸಂದರ್ಭದಲ್ಲಿಯೂ ಎದೆಗುಂದದೆ, ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದೆ.ಪಂದ್ಯದ ಗತಿಯನ್ನು ಬದಲಿಸುವ ನಿಟ್ಟಿನಲ್ಲಿ ಬ್ಯಾಟರ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದರು.ಕೇವಲ ಅಬ್ಬರವಷ್ಟೇ ಅಲ್ಲದೆ, ಅಗತ್ಯವಿದ್ದಾಗ ಸಿಂಗಲ್ಸ್ ಮತ್ತು ಡಬಲ್ಸ್ ಮೂಲಕ ಸ್ಟ್ರೈಕ್ ರೊಟೇಟ್ ಮಾಡಿ ಒತ್ತಡವನ್ನು ಮುಂಬೈ ತಂಡದ ಮೇಲೆ ವರ್ಗಾಯಿಸಿದರು.

ಮುಂಬೈ ಇಂಡಿಯನ್ಸ್ ತಂಡವು WPL ಇತಿಹಾಸದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವ ತಂಡಗಳಲ್ಲಿ ಒಂದಾಗಿದೆ. ಅಂತಹ ತಂಡದ ವಿರುದ್ಧ ಆಟವಾಡಿ ಗೆದ್ದು ಇತಿಹಾಸವನ್ನ ನಿರ್ಮಿಸುವುದು ಎಂದರೆ ಆರ್‌ಸಿಬಿಯ ತಾಂತ್ರಿಕ ಸಿದ್ಧತೆ ಮತ್ತು ಮಾನಸಿಕ ಸ್ಥೈರ್ಯ ಎಷ್ಟಿದೆ ಎಂಬುದು ತಿಳಿಯುತ್ತದೆ.

ಬೌಲಿಂಗ್ ಮತ್ತು ಫೀಲ್ಡಿಂಗ್ ಬೆಂಬಲ: ಬ್ಯಾಟರ್‌ಗಳಿಗೆ ಗುರಿಯನ್ನು ಸುಲಭವಾಗಿಸಿಕೊಟ್ಟಿದ್ದು ಆರ್‌ಸಿಬಿಯ ಬೌಲರ್‌ಗಳು. ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ದು ಬ್ಯಾಟರ್‌ಗಳಿಗೆ ಮುಕ್ತವಾಗಿ ಆಡಲು ಅವಕಾಶ ನೀಡಿತು.

ಸ್ಥಿರವಾದ ರನ್ ರೇಟ್: ಇತಿಹಾಸ ನಿರ್ಮಾಣವಾಗಬೇಕಾದರೆ ಕೇವಲ ಗೆಲುವು ಸಾಲದು, ಅದು ಯಾವ ರೀತಿ ಬಂತು ಎಂಬುದು ಮುಖ್ಯ. ಆರ್‌ಸಿಬಿ ತಂಡವು ಅತ್ಯುತ್ತಮ ರನ್ ರೇಟ್ ಕಾಯ್ದುಕೊಳ್ಳುವ ಮೂಲಕ ಅಂಕಪಟ್ಟಿಯಲ್ಲೂ ತನ್ನ ಸ್ಥಾನ ಭದ್ರಪಡಿಸಿಕೊಂಡಿತು.

“ಈ ಸಲ ಕಪ್ ನಮ್ದೇ” ಎನ್ನುವ ಅಭಿಮಾನಿಗಳ ಘೋಷಣೆಗೆ ಈ ಗೆಲುವು ಹೊಸ ಆಯಾಮ ನೀಡಿದೆ. ಮುಂಬೈ ವಿರುದ್ಧದ ಈ ಗೆಲುವು ಆರ್‌ಸಿಬಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ, ಇಡೀ ಟೂರ್ನಮೆಂಟ್‌ನಲ್ಲೇ ಇತರ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.
