ಮುಖ್ಯವಾಗಿ ಆರ್‌ಸಿಬಿ ತಂಡದ ಇಂಗ್ಲೆಂಡ್ ವೇಗಿ ಲಾರೆನ್ ಬೆಲ್ಅವರು ಮಹಿಳಾ ಪ್ರೀಮಿಯರ್ ಲೀಗ್ ಆರಂಭಿಕ ಪಂದ್ಯಗಳಲ್ಲಿ ಲಾರೆನ್ ಬೆಲ್ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ.

ಕ್ರಿಕೆಟ್‌ನಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ರನ್ ಬಿಟ್ಟುಕೊಡಲು ಹಿಂದೇಟು ಹಾಕುವ ಬೌಲರ್ ಎಂದರೆ ತಪ್ಪಾಗಲಾರದು. ಲಾರೆನ್ ಬೆಲ್ ತಮ್ಮ ಸ್ಪೆಲ್‌ಗಳಲ್ಲಿ ಅತ್ಯಂತ ಕಡಿಮೆ ಎಕಾನಮಿ ರೇಟ್ ಕಾಯ್ದುಕೊಳ್ಳುವ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಅವರು ಕೇವಲ 3.50 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದರು. ತಮ್ಮ 4 ಓವರ್‌ಗಳಲ್ಲಿ ಒಂದು ‘ಮೇಡನ್’ ಓವರ್ ಕೂಡ ಎಸೆದು ಎದುರಾಳಿಗಳಿಗೆ ರನ್ ಗಳಿಸಲು ಅವಕಾಶವೇ ನೀಡಲಿಲ್ಲ.

ಲಾರೆನ್ ಬೆಲ್ ಅವರ ಆಕರ್ಷಕ ನೋಟ ಮತ್ತು ಮೈದಾನದಲ್ಲಿನ ಅವರ ಚುರುಕುತನದಿಂದ ಆಟವಾಡುತ್ತಿದ್ದು, ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಮೂಲಕ ಪವರ್‌ಪ್ಲೇ ಅವಧಿಯಲ್ಲಿ ರನ್ ವೇಗಕ್ಕೆ ಬ್ರೇಕ್ ಹಾಕುತ್ತಿದ್ದಾರೆ.

ಪಂದ್ಯವೊಂದರಲ್ಲಿ ಸುಮಾರು 19 ಡಾಟ್ ಬಾಲ್‌ಗಳನ್ನು ಎಸೆಯುವ ಮೂಲಕ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದ್ದಾರೆ.ಎಲಿಸ್ ಪೆರ್ರಿ ಅವರ ಅನುಪಸ್ಥಿತಿಯಲ್ಲಿ ಲಾರೆನ್ ಬೆಲ್ ಆರ್‌ಸಿಬಿ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *