ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸ್ನೇಹಾ ಪಾತ್ರದ ಸಂಜನಾ ಬುರ್ಲಿ ಕಲರ್ಸ್‌ ಕನ್ನಡ ಚಾನೆಲ್ಲಿಗೆ ಪಾದಾರ್ಪಣೆ ಮಾಡಿರುವ ಪ್ರೋಮೊ ಇದೀಗ ರಿಲೀಸ್‌ ಆಗಿದೆ.

ಕಲರ್ಸ್‌ ಕನ್ನಡದಲ್ಲಿ ಆರಂಭವಾಗುತ್ತಿರುವ ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಸಂಜನಾ.ಈ ಸಿರೀಯಲ್‌ನಲ್ಲಿ ಗಗನ್‌, ಜಯಂತ್‌,ಶಿಶಿರ್‌ ಮತ್ತು ಭವಿಷ್ಯ ನಾಯಕನಿಗೆ ನಟಿಯಾಗಿ ಸಂಜನಾಬುರ್ಲಿ  ಅಭಿನಯಿಸುತ್ತಿದ್ದಾರೆ

ಪುಟ್ಟಕ್ಕನ ಮಗಳು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು ತಮ್ಮ ಹೆಚ್ಚಿನ ವ್ಯಾಸಂಗ ಮಾಡುವ ಕಾರಣ ಧಾರಾವಾಹಿಯಿಂದ ಹೊರಬಂದಿದ್ರು ಎನ್ನಲಾಗಿದೆ.

ನಾಲ್ಕು ಅಣ್ಣ-ತಮ್ಮಂದಿರುವ ಮನೆಯಲ್ಲಿ ಸೊಸೆಯಾಗಿ ಬರುತ್ತಿರುವ ಇವರು ಹೆಣ್ಣು ಇಲ್ಲದ ಮನೆಗೆ ಕಾಲಿರಿಸಿ ಮನೆಯನ್ನು ಸುಂದರಗೊಳಿಸುವ , ಮತ್ತು ಅಣ್ಣ-ತಮ್ಮಂದಿರ ಬದುಕನ್ನು ಕಟ್ಟಿಕೊಡುವ ಪಾತ್ರ ಸಂಜನಾ ಬುರ್ಲಿಯವರದು.

ಸದ್ಯ ಈ ದಾರವಾಹಿಯು ತಮಿಳಿನ ಅಯ್ಯನರ್‌ ತುನೈ ಧಾರಾವಾಗಿಯ ರಿಮೇಕ್‌ ಆಗಿದ್ದು, ಕನ್ನಡದಲ್ಲಿ ಗಂಧದ ಗುಡಿ ಎನ್ನುವುದಾಗಿದೆ.

Leave a Reply

Your email address will not be published. Required fields are marked *