ಸುನೀಲ್ ಕುಮಾರ್ ಮತ್ತು ಪ್ರಮೋದ್ ಮುತಾಲಿಕ್ ನಡುವಿನ ವಾಕ್ಸಮr ಮುಂದುವರೆಯುತ್ತಲೇ ಇದ್ದು, ಇಂದು ಮತ್ತೊಂದು ಹೊಸ ಬಾಂಬನ್ನು ಸಿಡಿದಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ಇಂಧನ ಸಚಿವ ಸುನೀಲ್ ಕುಮಾರ್ ಅವರ ಹಿಂದಿರುವವರೆಲ್ಲರೂ ಕಾಂಗ್ರೆಸ್ಸಿನವರು ಎಂಬ ಆರೋಪವನ್ನು ಮಾಡಿದ್ದು, ಇವರು ಭ್ರಷ್ಚಾಚಾರದ ಕೂಪದಲ್ಲಿ ಬಿದ್ದಿದ್ದಾರೆ. ಇವರನ್ನು ರಾಜಕೀಯಕ್ಕೆ ಪರಿಚಯಿಸಿದ್ದು ನಾನೇ. ಆದರೆ ಇವರ ಡೋಂಗಿ ಹಿಂದೂವಾದ ಮಾಡುತ್ತಿದ್ದು ಇವರಿಗೆ ಬುದ್ದಿ ಕಲಿಸಲು ನಾನು ಕಾರ್ಕಳದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಕಾರ್ಕಳ, ತೇರೆದಾಳ ಸೇರಿ ಒಟ್ಟು ಹತ್ತು ಕಡೆಗಳಲ್ಲಿ ಶ್ರೀರಾಮ ಸೇನೆಯ ಅಭ್ಯರ್ಥಿಗಳು ಸ್ಪರ್ಧಿಸಿ ಗೆಲ್ಲುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಮುಂದುವರೆದು ಎಸ್‌ಡಿಪಿಐ ದೇಶದ್ರೋಹಿ, ಸಮಾಜಘಾತುಕ ಪಕ್ಷ ಎಂದಿರುವ ಮುತಾಲಿಕ್, ಹಿಂದೂಗಳನ್ನು ಕೊಂದಿರುವ ಪಟ್ಟಿಯಲ್ಲಿ ಹೆಸರಿರುವ ಆರೋಪಿಗೆ ಟಿಕೆಟ್ ನೀಡಿರುವುದು, ಕೊಲೆ ಮಾಡುವುದಕ್ಕೆ ಸಹಕಾರ ನೀಡಿದಂತೆಯೇ ಆಗುತ್ತದೆ. ಇದೇನು ಹೊಸದಲ್ಲ ಮೊದಲಿನಿಂದಲೂ ಗೂಂಡಾಗಳಿಗೆ ಮತ್ತು ರೌಡಿಗಳಿಗೆ, ಕಿಡಿಗೇಡಿಗಳಿಗೆ ಅವಕಾಶ ನೀಡುವುದು ಇಸ್ಲಾಮ್ ಧರ್ಮದಲ್ಲಿದೆ ಎಂದು ಆರೋಪಿಸಿದ್ದಾರೆ.