ಮೈಸೂರು: ಬಿಜೆಪಿಯವರು ಧರ್ಮಸ್ಥಳ ಪ್ರಕರಣದ ಮೂಲಕ ರಾಜಕೀಯ ಲಾಭವನ್ನು ಪಡೆಯಲು ಹಾತೊರೆಯುತ್ತಿದ್ದಾರೆ ಆದರೆ ಅದು ಸಾದ್ಯವಾಗುವುದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಟಾಂಗ್‌ ನೀಡಿದ್ದಾರೆ.

ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿಯಲ್ಲಿ ಮಾತನಾಡಿದ ಸಿಎಂ, ಧರ್ಮಸ್ಥಳದ ಬಗ್ಗೆ ನಮಗೆಅಪಾರ ನಂಬಿಕೆಯಿಟ್ಟುಕೊಂಡಿದ್ದೇವೆ. ಹಿಂದೂ ಧರ್ಮವೆಂದರೆ ಅಪಪ್ರಚಾರ ಮಾಡೋದಲ್ಲ, ಸುಳ್ಳು ಸುದ್ದಿ ಹಬ್ಬಿಸೋದಲ್ಲ, ನಿಜವಾಗಿ ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ ಮಾಡಿದವರ್ಯಾರು? ಬಿಜೆಪಿಗರು ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ. ನಾವು ಬಾನು ಮುಷ್ತಾಕ್‌ರವರು ಉದ್ಘಾಟನೆ ಮಾಡಲು ಆಯ್ಕೆ ಮಾಡಿದ್ದೇವೆ. ದಸರಾ ಹಬ್ಬ ನಾಡಹಬ್ಬ.ಅದನ್ನು ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್‌ ಎಲ್ಲಾ ಧರ್ಮದವರು ಆಚರಿಸುವ ಹಬ್ಬವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Leave a Reply

Your email address will not be published. Required fields are marked *