ಬೆಂಗಳೂರು: ಧರ್ಮಸ್ಥಳ ಪ್ರಕರಣದ ಸಂಬಂಧ ಬಿಜೆಪಿ ನಾಯಕರು ಧರ್ಮಸ್ಥಳದಲ್ಲಿ “ಧರ್ಮಸ್ಥಳ ಚಲೋ” ನಡೆಸಿದ ನಂತರ ಕಾಂಗ್ರೆಸ್ ಶಾಸಕರೂ ಕೂಡಾ ಧರ್ಮಸ್ಥಳ ಚಲೋ ಆರಂಭಿಸಿದ್ದಾರೆ. ಈ ವಿಚಾರದ ಕುರಿತು ಗೃಹಸಚಿವರಾದ ಪರಮೇಶ್ವರ್‌ರವರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಧರ್ಮಸ್ಥಳದ ಮಂಜುನಾಥ ಸ್ವಾಮಿ ಯಾರೋಬ್ಬರಿಗೂ ಸೇರಿದ ದೇವರಲ್ಲ.ಎಲ್ಲರ ದೇವರು. ಯಾರು ಯಾವಾಗ ಬೇಕಾದರೂ ದೇವರ ದರ್ಶನ ಪಡೆದುಕೊಳ್ಳಬಹುದು. ಅದಕ್ಕೆ ಯಾರ ಅಪ್ಪಣೆ ಬೇಕಾಗಿಲ್ಲ.ಧರ್ಮಸ್ಥಳ ಪ್ರಕರಣ ನಡೆದ ನಂತರ ಈಗ ಭೇಟಿ ಮಾಡುತ್ತಿರುವುದುಏಕೆ? ಶ್ರೀ ಕ್ಷೇತ್ರಕ್ಕೆ ಕಳಂಕ ಅಂಟಿದೆ ಎಂದು ಹೋಗ್ತಿದ್ದಾರೋ? ತಮ್ಮ ಕಳಂಕವನ್ನು ತೊಳೆದುಕೊಳ್ಳಲು ಹೋಗ್ತಿದ್ದಾರೋ? ತಿಳಿಯದು ಎಂದು ತಿರುಗೇಟು ನೀಡಿದ್ದಾರೆ.
ಎಲ್ಲಾ ಪಕ್ಷಗಳು ಈ ಘಟನೆ ನಡೆಯದ ಮುನ್ನ ಹೋಗದೆ, ಈಗ ಯಾಕೆ ಹೋಗುತ್ತಿರುವುದು? ದು ರಾಜಕೀಯವಲ್ಲದೆ ಮತ್ತಿನ್ನೇನು.ಅವರು ಧರ್ಮಸ್ಥಳ ಚಲೋ ಮಾಡುತ್ತಿದ್ದಾರೆ ಎಂದು ಇವರು ಮಾಡುತ್ತಿದ್ದಾರೆ. ? ಶ್ರೀ ಕ್ಷೇತ್ರಕ್ಕೆ ಕಳಂಕ ಅಂಟಿದೆ ಎಂದು ಹೋಗ್ತಿದ್ದಾರೋ? ತಮ್ಮ ಕಳಂಕವನ್ನು ತೊಳೆದುಕೊಳ್ಳಲು ಹೋಗ್ತಿದ್ದಾರೋ? ತಿಳಿಯದು ದೇವರ ಮುಂದೆ ಏನೇನು ಬೇಡಿಕೆ ಇಡ್ತಾರೆ ಎಂಬುದು ಯಾರಿಗೆ ಗೊತ್ತು ಎಂದುಹೇಳಿದ್ದಾರೆ.
