ಬೆಂಗಳೂರು: ಆರ್. ಅಶೋಕ್ರ‌ನ್ನು ಸಚಿವ ಸ್ಥಾನದಿಂದ ಉಚ್ಚಾಟಿಸದೇ ಇದ್ರೆ ಬಿಜೆಪಿ ಪಕ್ಷವು ಶಾಶ್ವತವಾಗಿ ವಿಪಕ್ಷದಲ್ಲಿಯೇ ಇರಬೇಕಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ್‌ ವ್ಯಂಗ್ಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಸರ್ಕಾರವು 63% ಕಮಿಷನ್‌ ನ ಸರ್ಕಾರ ಎಂದು ಆರ್. ಅಶೋಕ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್‌, ಲೋಕಾಯುಕ್ತರು 2019ರಲ್ಲಿ ಕಾಂಗ್ರೆಸ್‌ ಕಮಿಷನ್‌ ಸರ್ಕಾರ ಎಂದು ಹೇಳಿದ್ದು, ಆರ್. ಅಶೋಕ್ ರೀತಿಯವರನ್ನು ವಿಪಕ್ಷದಲ್ಲಿಟ್ಟುಕೊಂಡರೆ ಬಿಜೆಪಿ ಸರ್ಕಾರವು ಸೂರ್ಯ-ಚಂದ್ರರಿರುವವರೆಗೂ ವಿಪಕ್ಷವಾಗಿಯೇ ಉಳಿಯುತ್ತದೆ. ಆರ್. ಅಶೋಕ್ ಅಜ್ಞಾನದಿಂದ , ಅತಿ ಬೇಜಾವಾಬ್ದಾರಿಯುತವಾಗಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷ ನಾಯಕರೆಂದರೆ ಸಿಎಂ ನಕಲು ಇದ್ದ ಹಾಗೆ ಆದ್ದರಿಂದ ಅವರ ಘನತೆಗೆ ತಕ್ಕಂತೆ ಮಾತು ಆಡಬೇಕು. ಒಂದು ಮಾತನಾಡಿದರೂ ಅಳೆದು ತೂಗಿ , ಮಾಹಿತಿ ಇಟ್ಟುಕೊಂಡು ಹೇಳಿಕೆಗಳನ್ನು ನೀಡಬೇಕು ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರು ಎಷ್ಟು ಬೇಗ ವಿಪಕ್ಷ ನಾಯಕರನ್ನು ಬದಲಾವಣೆ  ಮಾಡ್ತಾರೋ ಆಷ್ಟೇ ಅವರಿಗೆ ಒಳ್ಳೆಯದು. ಬದಲಾವಣೆ ಮಾಡದೇ ಹೋದ್ರೆ ಕೊನೆಯವರೆಗೂ ವಿಪಕ್ಷವಾಗಿಯೇ ಉಳಿಯಬೇಕಾಗುತ್ತದೆ ಎಂದು ಜಾತಕ ಹೇಳಿದ್ದಾರೆ.

Leave a Reply

Your email address will not be published. Required fields are marked *