ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಹೊಸ ವರ್ಷದ ಆಚರಣೆಯನ್ನು ವಿಭಿನ್ನವಾಗಿ ಆಚರಿಸಲು ಸಜ್ಜಾಗಿದ್ದಾರೆ.
ಶ್ರೀ ಹನುಮಾನ್ ಟ್ರಸ್ಟಿನವರು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಒಂದು ದಿನದ ಮುನ್ನವೇ ಹೋಸ ವರ್ಷದ ಆಚರಣೆಯನ್ನು ಆಚರಿಸಿ ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದ್ದಾರೆ.
ಹೊಸ ವರ್ಷದ ಆಚರಣೆಯಲ್ಲಿ ಎಲ್ಲರೂ ಮಧ್ಯ ಸೇವಿಸುವುದು, ಪ್ರಾಣಿ ಬಲಿಯನ್ನು ಮಾಡುವುದಕ್ಕೆ ಪರ್ಯಾಯವಾಗಿ ರೈತರು ಬೆಳೆದಿರುವ ಹಣ್ಣು ತರಕಾರಿಗಳನ್ನು ಕತ್ತರಿಸುವ ಮೂಲಕ ವಿಭಿನ್ನವಾಗಿ ಆಚರಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಹೊಸ ವರ್ಷ ಬಂತೆಂದು ಹುಚ್ಚೆದ್ದು ಕುಣಿಯುವ ಯುವಕರು ಮಧ್ಯ ಸೇವನೆ ಮಾಡಿ, ಮಾಂಸ ಭಕ್ಷ್ಯಗಳನ್ನು ಸೇವಿಸಿ, ಹುಚ್ಚೆದ್ದು, ಕುಣಿಯುತ್ತಾರೆ. ಇವತ್ತೊಂದು ದಿನ ಕುಡಿದರೆ ಏನಾಗುತ್ತದೆ ಎಂದು ಕುಡಿಯಲು ಪ್ರಾರಂಭಿಸಿ ಅದೇ ದುಷ್ಚಟಕ್ಕೆ ದಾಸರಾಗ್ತಾರೆ. ಈ ಕುಡಿತವನ್ನು ಬಿಟ್ಟು ಕಬ್ಬಿನ ಹಾಲು ಕುಡಿದು, ಹಣ್ಣು, ತರಕಾರಿ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಆಚರಿಸಿ ಎಂದು ಮನವಿ ಮಾಡಿದ್ದಾರೆ.

