ಬೆಂಗಳೂರು: ಹೈಕಮಾಂಡ್ ಸೂಚಿಸಿದರೆ ನಾನು ಸಿಎಂ ಆಗುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಹೈಕಮಾಂಡ್ ತೀರ್ಮಾನದಂತೆ ನಾನು ಸಿಎಂ ಆಗುತ್ತೇನೆ, ಎಲ್ಲರ ರೀತಿತಿ ನನಗೂ ಸಿಎಂ ಕುರ್ಚಿಯ ಆಕಾಂಕ್ಷೆಯಿದೆ .ಎಲ್ಲರಿಗೂ ಏನೇನೂ ನಮ್ಮ ಜೀವನದಲ್ಲಿ ಆಗಬೇಕು ಎನ್ನುವುದಿರುತ್ತದೆ. ಮನುಷ್ಯನಿಗೆ ಆಸೆಯೆನ್ನುವುದು ಇದ್ದೇ ಇರುತ್ತದೆ ಹಾಗೆಯೇ ನನಗೂ ಇದೆ. ಆಕಾಂಕ್ಷೆಯಿಲ್ಲದೆ ಹೋದರೆ ಅವರನ್ನು ಮನುಷ್ಯ ಎನ್ನುವುದಿಲ್ಲ ಎಂದು ಹೇಳಿದ್ದಾರೆ.
“ಯಾರು ಸಿಎಂ ಆಗ್ತಾರೆ ಯಾರಿಗೆ ಅಂತಹ ಪೂರಕವಾದ ವಾತವರಣವಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರುತ್ತೇ ಏಕೆಂದರೆ ನಿಮ್ಮ ಕ್ಯಾಮರಾ ಕಣ್ಣೀಗೆ ಬಿದ್ದಿರುತ್ತೇ ನೀವದನ್ನು ಗಮನಿಸಿದ್ದೀರಾ? ನಿಮಗದು ತಿಳಿದಿರುತ್ತೇ ಎಂದು ಪರೋಕ್ಷವಾಗೇ ಮೀಡಿಯಾದವರಿಗೆ ತಿಳಿಸಿದ್ದಾರೆ.
