ಸಚಿವ ಪ್ರಿಯಾಂಕ್‌ ಖರ್ಗೆ ಅವರು ಜೆಡಿಎಸ್‌ ಪಕ್ಷದ ವಿರುದ್ಧ “ಪಕ್ಷವನ್ನೇ ಮಾರಾಟಕ್ಕಿಟ್ಟಿದ್ದಾರೆ” ಎಂದು ಮಾಡಿರುವ ಲೇವಡಿಯು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಸಿಎಂ ಸಿದ್ದರಾಮಯ್ಯನವರನ್ನು ಲೀಸ್‌ ಪಿರಿಯಡ್‌ ಬಗ್ಗೆ ಮಾತನಾಡಿರುವ ಪರಿಣಾಮ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್‌ ಪಕ್ಷವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸಿರುವುದು ‘ತತ್ವ ಸಿದ್ಧಾಂತಗಳ ಮಾರಾಟ’ ಎಂದು ಪ್ರಿಯಾಂಕ್‌ ಖರ್ಗೆ ಬಿಂಬಿಸುತ್ತಿದ್ದಾರೆ. “ಜಾತ್ಯತೀತ” ಎಂಬ ಪದವನ್ನು ಹೆಸರಿಗೆ ಮಾತ್ರ ಇಟ್ಟುಕೊಂಡು ಕೇಸರಿ ಸಿದ್ಧಾಂತದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದನ್ನು ಅವರು ಪ್ರಶ್ನಿಸುತ್ತಿದ್ದಾರೆ.

ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ತನ್ನ ಸ್ವತಂತ್ರ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಮತ್ತು ಬಿಜೆಪಿಯ ಒಂದು ‘ಬಿ-ಟೀಮ್’ ಅಥವಾ ಪೂರಕ ಅಂಗವಾಗಿ ಮಾರ್ಪಟ್ಟಿದೆ ಎಂಬುದು ಖರ್ಗೆ ಅವರು ಟೀಕಿಸಿದ್ದಾರೆ. ಜೆಡಿಎಸ್ ಕೇವಲ ಒಂದು ಕುಟುಂಬದ ಹಿತಾಸಕ್ತಿಗಾಗಿ ಪಕ್ಷದ ಸಿದ್ಧಾಂತಗಳನ್ನು ಬಲಿಕೊಡುತ್ತಿದೆ ಮತ್ತು ಬಿಜೆಪಿಯ ಶರಣಾಗತಿಯಾಗಿದೆ ಎಂದು ಟೀಕಿಸುವ ಮೂಲಕ ಮತದಾರರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಇದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *